ಚೀನಾದಲ್ಲಿ ಸರ್ಕಾರದ ವಿರುದ್ಧ ಮಾತನಾಡಿದ್ರೆ ಹುಚ್ಚಾಸ್ಪತ್ರೆನೇ ಗತಿ!…ಏನಿದು ವರದಿ?

masthmagaa.com:

ಚೀನಾದ ಕಮ್ಯುನಿಸ್ಟ್‌ ಆಡಳಿತ ಜನರನ್ನ ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ಅವ್ರು ಯಾವುದಕ್ಕು ತುಟಿಕ್‌ ಪಿಟಿಕ್‌ ಅನ್ನಬಾರದು. ಸರ್ಕಾರದ ವಿರುದ್ಧ ಯಾರು ಧ್ವನಿ ಎತ್ತಬಾರದು ಅನ್ನೋ ರೂಲ್‌ ಮಾಡಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಅಧ್ಯಕ್ಷ ಶಿ ಜಿನ್‌ ಪಿಂಗ್‌ ಮಾತೆ ಅಂತಿಮ ಅನ್ನುವ ನಿಯಮ ಇದೆ. ಇದೀಗ ಚೀನಾ ಸರ್ಕಾರಕ್ಕೆ ಬದ್ಧರಾಗಿಲ್ಲದೆ ಇರುವವರನ್ನ, ಸರ್ಕಾರದ ವಿರುದ್ಧ, ಅಲ್ಲಿನ ಆಡಳಿತದ ವಿರುದ್ಧ ಪ್ರತಿಭಟನೆ ಮಾಡುವವರನ್ನ ಚೀನಾ ಸರ್ಕಾರ ಹುಚ್ಚಾಸ್ಪತ್ರೆಗೆ ಸೇರಿಸ್ತಾ ಇದೆ ಅನ್ನೋ ಭಯಾನಕ ವರದಿ ಓಡಾಡ್ತಿದೆ. ವರದಿಯಲ್ಲಿ ಅವರಿಗೆ ಚಿತ್ರ ಹಿಂಸೆಯನ್ನ ನೀಡಿ ಸರ್ಕಾರವೇ ಅವರನ್ನ ಹುಚ್ಚರನ್ನಾಗಿಸಿ ಬದಲಾಯಿಸ್ತಾ ಇದೆ ಅನ್ನುವ ಕರಾಳ ಸತ್ಯವೊಂದು ಹೊರ ಬಿದ್ದಿದೆ. ಸ್ಪೇನ್‌ ಮೂಲದ ಸೇಫ್‌ಗಾರ್ಡ್ ಎಂಬ ಎನ್‌ಜಿಒ ಚೀನಾದ ಈ ದುಷ್ಟತನವನ್ನ ಜಗತ್ತಿನ ಎದುರು ಬಟಾಬಯಲು ಮಾಡಿದೆ. ಇನ್ನು ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರವೇ ಚೀನಾ ಸರ್ಕಾರ 99 ಪ್ರಮುಖ ಜನರನ್ನ ಹುಚ್ಚಾಸ್ಪತ್ರಗೆ ಸೇರಿಸಿದೆ. ಕಾನೂನು ಸಂಘರ್ಷವನ್ನ ತಡೆಯುವ ಸಲುವಾಗಿ ಶಿ ಜಿನ್‌ ಪಿಂಗ್‌ ಈ ರೀತಿ ನಡೆದುಕೊಳ್ಳಲು ಆರಂಭಿಸಿದ್ದಾರೆ ಅಂತ ಮಾನವ ಹಕ್ಕುಗಳ ಹೋರಾಟಗಾರರು ಹೇಳಿದ್ದಾರೆ. ಇನ್ನು ಇಲ್ಲಿ ಇವರಿಗೆ ಬಲವಂತವಾಗಿ ವಿವಿಧ ರೀತಿಯ ಔಷಧವನ್ನ ಪ್ರಯೋಗ ಮಾಡೋದು, ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಡಿದ್ದು, ಎಲೆಕ್ಟ್ರೋಶಾಕ್‌ ಥೆರಪಿ ಮತ್ತು ಕತ್ತಲ ಕೋಣೆಯಲ್ಲಿ ಬಂಧಿಸೋದೆಲ್ಲ ಮಾಡ್ತ ಇದ್ದಾರೆ. ಹಾಗೆ ಜೈಲಿನಿಂದ ಹೊರ ಬಂದವರನ್ನು ಪ್ರತ್ಯೇಕವಾಡುವ ಪ್ರಯತ್ನ ನಡೆಯುತ್ತಿದೆ ಅಂತ ಎನ್‌ಜಿಒ ಹೇಳಿದೆ.

-masthmagaa.com

Contact Us for Advertisement

Leave a Reply