ಚೀನಾ ಲಸಿಕೆ ತುಂಬಾ ಪವರ್ಫುಲ್​​​! ಯಾವುದು ಗೊತ್ತಾ?

masthmagaa.com:

ಸಿನೋವ್ಯಾಕ್ ಬಯೋಟೆಕ್ ಸಂಸ್ಥೆಯ ಕೊರೋನಾ ಲಸಿಕೆ ಇಂಡೋನೇಷ್ಯಾದಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡ್ತಾ ಇದೆ. ಇಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದ್ದು, ಕೊರೋನಾದಿಂದ ರಕ್ಷಣೆ ನೀಡುವಲ್ಲಿ ಯಶಸ್ವಿಯಾಗಿದೆ. ಪಾಶ್ಚಿಮಾತ್ಯ ದೇಶಗಳ ಲಸಿಕೆಗಳಿಗೆ ಹೋಲಿಸಿದ್ರೆ, ಈ ಲಸಿಕೆ ಮಾನವ ಹಂತದ ಪ್ರಯೋಗದಲ್ಲಿ ತುಂಬಾ ಕಳಪೆ ಪ್ರದರ್ಶನ ತೋರಿತ್ತು. ಆದ್ರೆ ಇಂಡೋನೇಷ್ಯಾದಲ್ಲಿ 25,374 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದ್ದು, 2ನೇ ಡೋಸ್ ಪಡೆದ 28 ದಿನಗಳ ಬಳಿಕ ಸಾವಿನ ಸಾಧ್ಯತೆ 100 ಪರ್ಸೆಂಟ್ ಕಡಿಮೆ ಮಾಡಿದ್ರೆ,ಲಸಿಕೆ ಪಡೆದ ಏಳೇ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾದ ಸಾಧ್ಯತೆಯನ್ನು 96 ಪರ್ಸೆಂಟ್ ಕಡಿಮೆ ಮಾಡಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply