ವಿಶಾಲವಾದ ದ್ವೀಪ್ ಲೀಸ್​​ಗೆ ಪಡೆದ ಚೀನಾ..! ಅಮೆರಿಕಾಗೆ ಫುಲ್ ಶಾಕ್​​..!

ಸೊಲೋಮನ್​​ನ ವಿಶಾಲವಾದ ದ್ವೀಪವನ್ನು ಚೀನಾ 75 ವರ್ಷಗಳ ಅವಧಿಗೆ ಲೀಸ್​ಗೆ ಪಡೆದಿದೆ. ಕೆಲವೇ ದಿನಗಳ ಮುನ್ನ ಸೊಲೋಮನ್ ಚೀನಾದ ಜೊತೆಗೆ ರಾಜತಾಂತ್ರಿಕ ಸಂಬಂಧವನ್ನು ಶುರು ಮಾಡಿತ್ತು. ಚೀನಾ ಈ ಮಹತ್ವಾಕಾಂಕ್ಷೆಯ ರಾಜತಾಂತ್ರಿಕ ನಿರ್ಧಾರದ ಬಗ್ಗೆ ಯಾವುದೇ ರೀತಿಯಲ್ಲಿ ಅಧಿಕೃತಪಡಿಸಿಲ್ಲ. ತುಲಾಗಿ ಎಂಬ ಹೆಸರಿನ ಈ ದ್ವೀಪ ಈ ಹಿಂದೆ ಬ್ರಿಟನ್ ಮತ್ತು ಜಪಾನ್​​ನ ದಕ್ಷಿಣ ಪ್ರಶಾಂತ ಸಾಗರದಲ್ಲಿನ ಹೆಡ್​ಕ್ವಾಟ್ರಸ್ ಕೂಡ ಆಗಿತ್ತು.  2ನೇ ವಿಶ್ವಯುದ್ಧದಲ್ಲೂ ಈ ದ್ವೀಪ ಮಹತ್ವದ ಪಾತ್ರವನ್ನು ವಹಿಸಿತ್ತು. ಈಗ ಈ ಆಯಕಟ್ಟಿನ ದ್ವೀಪ ಚೀನಾದ ವಶವಾದಂತಾಗಿದೆ. ಕಳೆದ ತಿಂಗಳು ಚೀನಾ ಮತ್ತು ಸೊಲೋಮನ್​ ಪ್ರಾಂತೀಯ ಸರ್ಕಾರದ ನಡುವೆ ಮಹತ್ವದ ರಹಸ್ಯ ಒಪ್ಪಂದವಾಗಿತ್ತು. ಅದರಂತೆ ಚೀನಾದ ಕಮ್ಯೂನಿಸ್ಟ್​ ಮೂಲದ ಕಂಪನಿಯೊಂದು  ತುಲಾಗಿ ದ್ವೀಪ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಪಡಿಸೋ ಉದ್ದೇಶದಿಂದ ಲೀಸ್​​ಗೆ ಪಡೆದಿದೆ.

ಈ ರಹಸ್ಯ ಒಪ್ಪಂದದಿಂದಾಗಿ ತುಲಾಗಿ ದ್ವೀಪದ ಜನ ಶಾಕ್ ಆಗಿದ್ದಾರೆ. ತಕ್ಷಣವೇ ಅಮೆರಿಕಾ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ದಕ್ಷಿಣ ಪ್ರಶಾಂತ ಸಾಗರದಲ್ಲಿ ಚೀನಾವನ್ನು ಕಂಟ್ರೋಲ್ ಮಾಡೋಕೆ ಅಮೆರಿಕಾಗೆ ಈ ದ್ವೀಪ ತುಂಬಾ ಮಹತ್ವದ್ದಾಗಿದೆ. ಹೀಗಾಗಿ ಚೀನಾ, ಸೊಲೋಮನ್ ನಡುವಿನ ಈ ರಹಸ್ಯ ಒಪ್ಪಂದದಿಂದ ಅಮೆರಿಕಾಗೆ ಫುಲ್ ಟೆನ್ಶನ್ ಆಗಿದೆ.

 

Contact Us for Advertisement

Leave a Reply