ಚೀನಾ ಜಲಗಡಿಯಲ್ಲಿ ಸಂಪರ್ಕ ಕಳೆದುಕೊಳ್ತಿದೆ ಹಡಗುಗಳು! ಯಾಕೆ ಗೊತ್ತಾ?

masthmagaa.com:

ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯಾದ ಚೀನಾ ವಿಶ್ವಕ್ಕೆ ಹೊಸದೊಂದು ತಲೆಬಿಸಿ ಹುಟ್ಟುಹಾಕಿದೆ. ಹಡಗುಗಳು ಚೀನಾದ ಜಲಗಡಿಯೊಳಗೆ ಹೋಗ್ತಿದ್ದಂತೆ ಸಂಪರ್ಕ ಕಡಿದುಕೊಳ್ತಿದೆ. ಅಂದ್ರೆ ಹಡಗುಗಳ ಇಂಡಸ್ಟ್ರಿ ಟ್ರ್ಯಾಕಿಂಗ್ ಸಿಸ್ಟಂ ಸಿಗ್ನಲ್ ಕಳುಹಿಸೋದನ್ನು ನಿಲ್ಲಿಸ್ತಿವೆ. ಇದು ವಿಶ್ವದ ಸಪ್ಲೈ ಚೇನ್​​​ಗೆ ಹೊಸ ಸವಾಲಾಗಿ ಪರಿಣಮಿಸಿದೆ. ಹಡಗುಗಳಲ್ಲಿ ಆಟೋಮ್ಯಾಟಿಕ್ ಐಡೆಂಟಿಫಿಕೇಶನ್ ಸಿಸ್ಟಂ ಇರುತ್ತೆ. ಇದರಿಂದ ಶಿಪ್ಪಿಂಗ್ ಕಂಪನಿಗಳು ವಿಶ್ವದಾದ್ಯಂತ ಎಲ್ಲಾ ಹಡಗುಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತೆ. ಈ ಕಂಪನಿಯ ಸ್ಟೇಷನ್​​ಗಳು ಸಾಮಾನ್ಯವಾಗಿ ಸಮುದ್ರ ತೀರದಲ್ಲೇ ಇರುತ್ತೆ. ನಿರ್ದಿಷ್ಟ ಜಾಗ, ವೇಗ, ಸಾಗುತ್ತಿರುವ ಡೈರೆಕ್ಷನ್​​ ಮತ್ತು ಹೆಸರನ್ನು ಹಡಗುಗಳು ಹೈಫ್ರೀಕ್ವೆನ್ಸಿ ರೇಡಿಯೋ ಮೂಲಕ ಕಳುಹಿಸುತ್ತವೆ. ಒಂದು ವೇಳೆ ಹಡಗುಗಳು ಆ ಸ್ಟೇಷನ್​​ಗಳ ರೇಂಜ್​​ನಿಂದ ಹೊರಗಿದ್ರೆ ಉಪಗ್ರಹಗಳ ಮೂಲಕ ಮಾಹಿತಿ ನೀಡಲಾಗುತ್ತೆ. ಆದ್ರೆ ಚೀನಾದಲ್ಲಿ ಮಾತ್ರ ಕಳೆದ ಮೂರು ವಾರಗಳಿಂದ ಇದು ಸಾಧ್ಯವಾಗ್ತಿಲ್ಲ. ಅದ್ರ ಜಲಗಡಿಗೆ ಬಂದ ಶೇಕಡಾ 90ರಷ್ಟು ಹಡಗುಗಳು ಯಾವುದೇ ರೀತಿಯ ಮಾಹಿತಿ ಕಳುಹಿಸುತ್ತಿಲ್ಲ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಚೀನಾ ವಿದೇಶಾಂಗ ಸಚಿವಾಲಯ, ನಾವು ಕರಾವಳಿ ತೀರದಲ್ಲಿ ಅಂತಾರಾಷ್ಟ್ರೀಯ ಒಪ್ಪಂದ ಮತ್ತು ಕಾನೂನಿಗೆ ಅನುಗುಣವಾಗಿಯೇ ಆಟೋಮ್ಯಾಟಿಕ್ ಐಡೆಂಟಿಫಿಕೇಷನ್ ಸಿಸ್ಟಂ ಕೇಂದ್ರಗಳನ್ನು ಸ್ಥಾಪಿಸಿದ್ದೀವಿ. ಅವುಗಳು ಕಾರ್ಯ ನಿರ್ವಹಣೆ ನಿಲ್ಲಿಸಿಲ್ಲ. ನಾರ್ಮಲ್ ಆಗಿಯೇ ಕೆಲಸ ಮಾಡ್ತಿವೆ ಅಂತ ಹೇಳಿಕೊಂಡಿದೆ. ಆದ್ರೆ ಚೀನಾದ ಸ್ಟೇಟ್ ಕೌನ್ಸಿಲ್ ಇನ್​ಫಾರ್ಮೇಷನ್​ ಕಚೇರಿ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ತಜ್ಞರ ಪ್ರಕಾರ ಇದಕ್ಕೆಲ್ಲಾ ಕಾರಣ ಚೀನಾದಲ್ಲಿ ನವೆಂಬರ್ 1ರಿಂದಲೇ ಜಾರಿಗೆ ಬಂದಿರೋ ಕಾನೂನು. ಯೆಸ್​.. ಚೀನಾದಲ್ಲಿ ಹೊಸದಾಗಿ ಪರ್ಸನಲ್ ಇನ್​ಫಾರ್ಮೇಷನ್ ಪ್ರೊಟೆಕ್ಷನ್ ಲಾ ಜಾರಿಗೆ ಬಂದಿದೆ. ತನ್ನ ಗಡಿಯೊಳಗಿನ ಮಾಹಿತಿಯನ್ನು ಹೊರಹೋಗದಂತೆ ಕಂಟ್ರೋಲ್ ಮಾಡೋ ಕಾನೂನು ಇದಾಗಿದೆ. ಆದ್ರೆ ಹೊಸ ಕಾನೂನಲ್ಲಿ ಹಡಗಿನ ಮಾಹಿತಿ ಇಲ್ಲವಾದ್ರೂ ಅಧಿಕಾರಿಗಳು ಮುಂಜಾಗ್ರತೆ ಕ್ರಮವಾಗಿ ತಡೆ ಹಿಡಿದಿರಬಹುದು ಅಂತ ಅಂದಾಜಿಸಲಾಗಿದೆ.

-masthmagaa.com

Contact Us for Advertisement

Leave a Reply