ಲಂಕಾಗೆ ಬಂದಿಳಿದ ಚೀನಾದ ಹಡಗಿನ ವಿಚಾರವಾಗಿ ಚೀನಾ ಆಡಳಿತ ಪ್ರತಿಕ್ರಿಯೆ ಕೊಟ್ಟಿದ್ದು ಹೀಗೆ!

masthmagaa.com:

ಲಂಕಾಗೆ ಚೀನಾದ ಪತ್ತೆದಾರಿ ಹಡಗಿನ ಪ್ರವೇಶದ ವಿಚಾರವಾಗಿ ಭಾರತ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಇದೀಗ ಆ ಹಡಗು ಲಂಕಾಗೆ ಬಂದಾಗಿದೆ. ಇದರ ಬೆನ್ನಲ್ಲೇ ಈಗ ಚೀನಾ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು ʻಇದು ಯಾವುದೇ ದೇಶದ ಭದ್ರತೆಗೆ ಹಾನಿಯುಂಟು ಮಾಡುವುದಿಲ್ಲ. ಇದಕ್ಕೆ ಮೂರನೇ ದೇಶ ಅಡ್ಡಿಯುಂಟು ಮಾಡಬಾರದು ಅಂತ ಭಾರತಕ್ಕೆ ತಾಕೀತು ಮಾಡಿದೆ. ಈ ಬಗ್ಗೆ ಮಾತನಾಡಿರೋ ಚೀನಾದ ವಿದೇಶಾಂಗ ವಕ್ತಾರ ವಾಂಗ್‌ವೆನ್‌ಬೆನ್‌ ʻಹಡಗು ಲಂಕಾಗೆ ಬಂದಿರೋದು ಅಂತಾರಾಷ್ಟ್ರೀಯ ಕಾನೂನು ಪದ್ದತಿಗಳಿಗೆ ಅನುಗುಣವಾಗಿದೆ. ಲಂಕಾ ಜೊತೆಗೆ ನಮ್ಮ ಸಹಕಾರದ ಭಾಗವಾಗಿ ಅಲ್ಲಿಗೆ ನಮ್ಮ ಹಡಗು ಹೋಗಿದೆ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ. ಇನ್ನು ಈ ಹಡಗಿನ ವಿವಾದದ ಬಗ್ಗೆ ಅತ್ತ ಲಂಕಾದಲ್ಲಿರೋ ಚೀನಾ ರಾಯಭಾರಿಯನ್ನ ಕೇಳಿದ್ರೆ ʻನನಗೆ ಗೊತ್ತಿಲ್ಲ..ನೀವು ಭಾರತೀಯ ಸ್ನೇಹಿತರನ್ನ ಕೇಳ್ಬೇಕು. ಬಹುಶಃ ಇದೇ ಜೀವನ ಅಂತ ಹೇಳಿದ್ದಾರೆ. ಅಂದ್ರೆ ಭಾರತಕ್ಕೆ ಆರೋಪ ಮಾಡೋದೆ ಜೀವನ ಅನ್ನೋ ಅರ್ಥ ಬರೋ ರೀತಿ ಹೇಳಿದ್ದಾರೆ. ಆದ್ರೆ ನಿಖರವಾಗಿ ಹೀಗೆ ಅಂತ ಹೇಳಿಲ್ಲ..ಇದಕ್ಕೆ ಯಾವುದೇ ವಿವರಣೆಯನ್ನೂ ಕೂಡ ಕೊಟ್ಟಿಲ್ಲ. ಇನ್ನು ಈ ಹಡಗು ಲಂಕಾಗೆ ಬಂದಿದ್ದು ಅತ್ತ ಪಾಕಿಸ್ತಾನಕ್ಕೂ ಕೂಡ ಚೀನಾ ತನ್ನ ಸೈನಿಕರನ್ನ ಕಳುಹಿಸಿಕೊಡಲಿದೆ ಅಂತ ವರದಿಯಾಗಿದೆ. ಆದ್ರೆ ಇದಕ್ಕೆ ಚೀನಾ ಪಾಕ್‌ ಎಕಾನಾಮಿಕ್‌ ಕಾರಿಡಾರ್‌ಗಳ ರಕ್ಷಣೆಗೆ ಅಂತ ಕೂಡ ಹೇಳಲಾಗ್ತಿದೆ. ಆದ್ರೆ ಚೀನಾ ಸರ್ಕಾರದಿಂದ ಅಫಿಷಿಯಲ್‌ ಆಗಿ ಯಾವುದೇ ಅನೌನ್ಸ್‌ಮೆಂಟ್‌ ಆಗಿಲ್ಲ.

-masthmagaa.com

Contact Us for Advertisement

Leave a Reply