masthmagaa.com:

ಭಾರತದ ಪವರ್ ಗ್ರಿಡ್ ಸಿಸ್ಟಂ ಮೇಲೆ ಚೀನಾ ಸೈಬರ್ ದಾಳಿ ನಡೆಸಿತ್ತು ಅಂತ ಅಮೆರಿಕದ ರೆಕಾರ್ಡೆಡ್​ ಫ್ಯೂಚರ್ (Recorded Future) ಸೈಬರ್ ಸೆಕ್ಯೂರಿಟಿ ಕಂಪನಿ ವರದಿ ಮಾಡಿದ ಬೆನ್ನಲ್ಲೇ ಭಾರತಕ್ಕೆ ಅಮೆರಿಕದಿಂದ ಬೆಂಬಲ ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲಿ ಜೋ ಬೈಡೆನ್ ಸರ್ಕಾರ ಭಾರತದ ಪರವಾಗಿ ನಿಲ್ಲಬೇಕು ಅಂತ ಅಮೆರಿಕ ಕಾಂಗ್ರೆಸ್ ಸದಸ್ಯ ಫ್ರಾಂಕ್ ಪಲ್ಲೋನ್ ಹೇಳಿದ್ದಾರೆ. ‘ನಮ್ಮ ಸ್ಟ್ರಾಟಜಿಕ್ ಪಾರ್ಟ್​​ನರ್ ಜೊತೆ ಅಮೆರಿಕ ನಿಲ್ಲಬೇಕು. ಭಾರತದ ಪವರ್ ಗ್ರಿಡ್​ ಮೇಲೆ ಚೀನಾದ ಡೇಂಜರಸ್ ಸೈಬರ್ ದಾಳಿಯನ್ನ ಖಂಡಿಸಬೇಕು. ಚೀನಾದ ಈ ಸೈಬರ್ ದಾಳಿಯಿಂದ ಕೊರೋನಾದಂತಹ ಕಷ್ಟದ ಸಮಯದಲ್ಲಿ ಆಸ್ಪತ್ರೆಗಳು ಜನರೇಟರ್​ಗಳನ್ನ ಆಧರಿಸಬೇಕಾಯ್ತು. ಬಲವಂತ ಮತ್ತು ಬೆದರಿಕೆ ಮೂಲಕ ಚೀನಾ ಈ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ನಾವು ಬಿಡಲ್ಲ’ ಅಂತ ಫ್ರಾಂಕ್ ಪಲ್ಲೋನ್ ಟ್ವೀಟ್ ಮಾಡಿದ್ದಾರೆ. ಅಂದ್ಹಾಗೆ ಚೀನಾ ಸರ್ಕಾರದ ಜೊತೆ ಲಿಂಕ್ ಹೊಂದಿರೋ ಹ್ಯಾಕರ್​ಗಳ ಗುಂಪು ಕಳೆದ ವರ್ಷ ಅಕ್ಟೋಬರ್​ನಲ್ಲಿ ಭಾರತದ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ವೈರಸ್ ಬಿಟ್ಟಿದ್ರು ಅಂತ ರೆಕಾರ್ಡೆಡ್​ ಫ್ಯೂಚರ್ ಹೇಳಿತ್ತು. ಇದರ ಪರಿಣಾಮ ಮುಂಬೈ ನಗರ ಕತ್ತಲೆಯಲ್ಲಿ ಮುಳುಗಿತ್ತು. ಭಾರತ-ಚೀನಾ ಗಡಿಯಲ್ಲಿ ಸಂಘರ್ಷದ ವಾತಾವರಣ ಇದ್ದಾಗಲೇ ಈ ಸೈಬರ್ ದಾಳಿ ನಡೆದಿತ್ತು.

-masthmagaa.com

Contact Us for Advertisement

Leave a Reply