ಅಮೆರಿಕದಲ್ಲಿ ಐವರು ಚೀನಾ ವಿಜ್ಞಾನಿಗಳ ಬಂಧನ!

masthmagaa.com:

ಅಮೆರಿಕದ ಸ್ಟೇಟ್​​ ಡಿಪಾರ್ಟ್​​​ಮೆಂಟ್ ಚೀನಾ ಟ್ರೇಡ್ ಸೀಕ್ರೆಟ್​​​​ಗಳನ್ನು ಕದಿಯದಂತೆ ತಡೆಯಲು, ವಿಶ್ವವಿದ್ಯಾಲಯಗಳು ಕಂಡು ಹಿಡಿದ ತಂತ್ರಜ್ಞಾನಗಳನ್ನು ರಕ್ಷಿಸಲು ಚೀನಾ ಇನಿಶಿಯೇಟಿವ್ ಅನ್ನೋ ಕಾರ್ಯಕ್ರಮ ಶುರು ಮಾಡಿತ್ತು. ಅದ್ರಂತೆ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅಮೆರಿಕ ವಿವಿಗಳಲ್ಲಿದ್ದ ಐವರು ಚೀನೀ ಪ್ರಜೆಗಳನ್ನು ಅರೆಸ್ಟ್ ಮಾಡಲಾಗಿದೆ. ಅವರ ವಿರುದ್ಧ ವೀಸಾ ಫ್ರಾಡ್​​ ಮತ್ತು ಚೀನೀ ಮಿಲಿಟರಿ ಜೊತೆ ಸಂಬಂಧ ಹೊಂದಿರೋದನ್ನು ಮುಚ್ಚಿಟ್ಟಿರೋ ಆರೋಪ ಮಾಡಲಾಗಿದೆ. ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಿಂದ ವಾಂಗ್ ಕ್ಸಿನ್, ಸ್ಟಾಂಡ್​ಫೋರ್ಡ್​ ಯುನಿವರ್ಸಿಟಿಯಿಂದ ಸಾಂಗ್ ಚೆನ್, ಬ್ಲೂಮಿಂಗ್ಟನ್ ಯುನಿವರ್ಸಿಟಿಯಿಂದ ಝಾವೊ ಕೈ ಕೈ, ನ್ಯಾಷನಲ್ ಯುನಿವರ್ಸಿಟಿ ಆಫ್ ಡಿಫೆನ್ಸ್​​ನ ಗುವಾನ್ ಲೇಯ್​​, ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಡೇವಿಸ್ ಸ್ಕೂಲ್ ಆಫ್ ಮೆಡಿಸಿನ್​​ನ ತಾಂಗ್​ ಜುವಾನ್​ರನ್ನು ಅರೆಸ್ಟ್ ಮಾಡಲಾಗಿದೆ. ಇವರಲ್ಲಿ ನಾಲ್ವರ ವಿರುದ್ಧ ಮತ್ತಷ್ಟು ಬೇರೆ ಆರೋಪಗಳನ್ನು ಕೂಡ ಹೊರಿಸಲಾಗಿದೆ. ಮತ್ತೊಂದ್ಕಡೆ ಅಮೆರಿಕನ್ನರ ಸೂಕ್ಷ್ಮ ಮಾಹಿತಿಯನ್ನು ರಕ್ಷಿಸಲು ಜೋ ಬೈಡೆನ್ ಸರ್ಕಾರ ಪ್ಲಾನ್ ಮಾಡ್ತಿದ್ದು, ಹೊಸ ಆದೇಶ ಹೊರಡಿಸಿದೆ. ಅದ್ರಲ್ಲಿ ಒಂದು ವೇಳೆ ಅಮೆರಿಕ ಮಾರುಕಟ್ಟೆಯಲ್ಲಿ ಇರೋಕೆ ಬಯಸೋದಾದ್ರೆ, ಖಾಸಗಿ ಮಾಹಿತಿ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಚೀನೀ ಆ್ಯಪ್​​ಗಳಿಗೆ ಎಚ್ಚರಿಸಲಾಗಿದೆ. ಚೀನಾ ಮತ್ತು ರಷ್ಯಾದಂತ ವಿರೋಧಿಗಳು ಖಾಸಗಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಅಮೆರಿಕನ್ನರ ಹೆಚ್ಚಿನ ಮಾಹಿತಿ ಪಡೆಯದಂತೆ ನೋಡಿಕೊಳ್ಳೋದು ಇದರ ಪ್ರಮುಖ ಗುರಿ ಅಂತ ಕೂಡ ಹೇಳಲಾಗಿದೆ.

-masthmagaa.com

Contact Us for Advertisement

Leave a Reply