ಆಸ್ಪತ್ರೆಯಲ್ಲಿದ್ದ ಕ್ರಿಸ್​ ಗೇಲ್ ಆರ್​ಸಿಬಿ ವಿರುದ್ಧ ಆರ್ಭಟಿಸಲು ರೆಡಿ

masthmagaa.com:

ಈ ಬಾರಿಯ ಐಪಿಎಲ್​ನಲ್ಲಿ ಸತತ ಸೋಲು ಕಾಣುತ್ತಿರುವ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡಕ್ಕೆ ಶುಭಸುದ್ದಿ. ಹೊಟ್ಟೆ ನೋವಿನ ಕಾರಣದಿಂದಾಗಿ ತಂಡದಿಂದ ದೂರವಿದ್ದ ಆರಂಭಿಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ ಗುಣಮುಖರಾಗಿದ್ದಾರೆ. ಹೀಗಾಗಿ ಗುರುವಾರ ನಡೆಯಲಿರುವ ಪಂಜಾಬ್​ ಮತ್ತು ಆರ್​ಸಿಬಿ ನಡುವಿನ ಪಂದ್ಯದಲ್ಲಿ ಗೇಲ್​ ಕಣಕ್ಕಿಳಿಯುವ ಸಾಧ್ಯತೆ ಇದೆ.

ಹೊಟ್ಟೆಯಲ್ಲಿ ಇನ್ಫೆಕ್ಷನ್ ಆದ ಕಾರಣ ಅವರು ಈ ಹಿಂದಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಅಲ್ಲದೆ ಆಸ್ಪತ್ರೆಗೂ ದಾಖಲಾಗಿದ್ದರು. ಆದ್ರೀಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಅಂತ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ ತನ್ನ ಅಧಿಕೃತ ವೆಬ್​ಸೈಟ್​​ನಲ್ಲಿ ತಿಳಿಸಿದೆ. ಸದ್ಯ ಅವರು ತಂಡದ ಇತರ ಸದಸ್ಯರ ಜೊತೆ ನೆಟ್​ ಪ್ರಾಕ್ಟಿಸ್​​ನಲ್ಲಿ ಭಾಗವಹಿಸಿದ್ದಾರೆ.

ಅಂದ್ಹಾಗೆ ಆಡಿದ 7 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆಲುವು ಸಾಧಿಸಿರುವ ಪಂಜಾಬ್ ಪಾಯಿಂಟ್ಸ್​ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇಂತಹ ಸಂದರ್ಭದಲ್ಲಿ ತಂಡಕ್ಕೆ ಕ್ರಿಸ್​ ಗೇಲ್ ಕಮ್​ಬ್ಯಾಕ್​ ಮಾಡಿರೋದು ಉತ್ತಮ ಬೆಳವಣಿಗೆ. ಆದ್ರೆ ಆರ್​ಸಿಬಿ ದೃಷ್ಟಿಯಿಂದ ಒಳ್ಳೆಯ ವಿಚಾರವಲ್ಲ. ಯಾಕಂದ್ರೆ ಈ ಹಿಂದಿನ ಸೀಸ್​ನ್​ಗಳಿಗೆ ಹೋಲಿಸಿದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಉತ್ತಮ ಫಾರ್ಮ್​ನಲ್ಲಿದೆ. ಪಾಯಿಂಟ್ಸ್​ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದ್ರೆ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಗೇಲ್ ಕಣಕ್ಕಿಳಿದ್ರೆ ಅವರನ್ನ ಕಟ್ಟಿ ಹಾಕೋದು ಹೇಗೆ ಅನ್ನೋ ಚರ್ಚೆ ಈಗ ಆರ್​ಸಿಬಿ ಕ್ಯಾಂಪ್​ನಲ್ಲಿ ನಡೆಯುತ್ತಿದೆ.

-masthmagaa.com

Contact Us for Advertisement

Leave a Reply