masthmagaa.com:

ಜಮೈಕಾ ಮೂಲದ ವೆಸ್ಟ್​ ಇಂಡೀಸ್ ಕ್ರಿಕೆಟರ್ ಕ್ರಿಸ್ ಗೇಲ್ ಭಾರತದ ಪ್ರಧಾನಿ ನರೇಂದ್ರ ಮೋದಿ, ಭಾರತ ಸರ್ಕಾರ ಮತ್ತು ಭಾರತದ ಜನತೆಗೆ ಕೈಮುಗಿದು ಧನ್ಯವಾದ ಹೇಳಿದ್ದಾರೆ. ಇದಕ್ಕೆ ಕಾರಣ ಭಾರತ ಸರ್ಕಾರವು ‘ವ್ಯಾಕ್ಸಿನ್ ಮೈತ್ರಿ’ ಅನ್ನೋ ಕಾರ್ಯಕ್ರಮದ ಅಡಿಯಲ್ಲಿ ಜಮೈಕಾಗೆ 50,000 ಕೊರೋನಾ ಲಸಿಕೆಯನ್ನ ಡೊನೇಟ್ ಮಾಡಿರೋದು. ಈ ಹಿನ್ನೆಲೆ ಜಮೈಕಾದಲ್ಲಿರೋ ಭಾರತದ ರಾಯಭಾರ ಕಚೇರಿ ಅಥವಾ ಹೈ ಕಮಿಷನ್ ಕಚೇರಿಗೆ ಭೇಟಿ ನೀಡಿದ ‘ಯುನಿವರ್ಸಲ್ ಬಾಸ್’ ಕ್ರಿಸ್​ ಗೇಲ್​ ವಿಡಿಯೋ ಸಂದೇಶ ಮೂಲಕ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಶೀಘ್ರದಲ್ಲೇ ನಿಮ್ಮ ಮುಂದೆ ಬರ್ತೀನಿ ಅಂತ ಐಪಿಎಲ್​ ನೆನಪಿಸಿದ್ದಾರೆ.

ಇತ್ತೀಚೆಗೆ ಜಮೈಕಾ ಮೂಲದ ಮತ್ತೊಬ್ಬ ಕ್ರಿಕೆಟರ್​ ಆಂಡ್ರೆ ರಸ್ಸೆಲ್ ಕೂಡ, ‘ಪ್ರಧಾನಿ ಮೋದಿ ಮತ್ತು ಜಮೈಕಾದಲ್ಲಿರೋ ಭಾರತದ ರಾಯಭಾರ ಕಚೇರಿಗೆ ಬಿಗ್​, ಬಿಗ್ ಥ್ಯಾಂಕ್ಯೂ. ಜಗತ್ತು ಸಹಜಸ್ಥಿತಿಗೆ ವಾಪಸ್ ಹೋಗೋದನ್ನ ನೋಡಲು ಇಷ್ಟಪಡುತ್ತೇನೆ. ಭಾರತ ಮತ್ತು ಜಮೈಕಾ ಈಗ ಸಹೋದರರಾಗಿದ್ದೇವೆ’ ಅಂತ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಜಮೈಕಾಗೆ ಸೋಮವಾರ ಭಾರತದ ಲಸಿಕೆ ತಲುಪಿತ್ತು. ಭಾರತದ ಜೊತೆ ಉತ್ತಮ ಸಂಬಂಧ ಹೊಂದಿರೋ ದೇಶಗಳಿಗೆ ‘ವ್ಯಾಕ್ಸಿನ್ ಮೈತ್ರಿ’ ಅನ್ನೋ ಕಾರ್ಯಕ್ರಮದ ಅಡಿ ಲಸಿಕೆಯನ್ನ ಕಳಿಸಲಾಗ್ತಿದೆ. ಇವತ್ತು ಸೋಲೋಮನ್ ಐಲ್ಯಾಂಡ್ ಎಂಬ ದೇಶಕ್ಕೆ ಭಾರತದ ಲಸಿಕೆ ರೀಚ್ ಆಗಿದೆ.

-masthmagaa.com

Contact Us for Advertisement

Leave a Reply