ಮಾವನಿಗೆ ವಿಶ್ ಮಾಡಲು ಬಂದು ಹೆಣವಾದ ಅಳಿಯ..!

ಅಳಿಯನೊಬ್ಬ ಮಾವನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಲು ಹೋಗಿ ಜೀವ ಬಿಟ್ಟಿದ್ದಾನೆ. ಫ್ಲೋರಿಡಾದ ಗಾಲ್ಫ್ ಬ್ರೀಜ್‍ನಲ್ಲಿ ಈ ಘಟನೆ ನಡೆದಿದೆ. 37 ಕ್ರಿಸ್ಟೋಫರ್ ಬರ್ಗನ್ ಎಂಬುವವರು ತಮ್ಮ ಮಾವನ 62ನೇ ವರ್ಷದ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಆಗಿ ವಿಶ್ ಮಾಡಬೇಕು ಅಂತ 4500 ಮೈಲಿ ದೂರದ ನಾರ್ವೆಯಿಂದ ಬಂದಿದ್ದರು. ರಾತ್ರಿ 11.30 ವೇಳೆಗೆ ಹಿಂದಿನ ಬಾಗಿಲು ಬಡಿದ ಶಬ್ದ ಕೇಳಿದ 62 ವರ್ಷದ ರಿಚರ್ಡ್ ಡೆನ್ನಿಸ್ ತಮ್ಮ ಗನ್ ಹಿಡಿದು ಹೋಗಿ ಬಾಗಿಲು ತೆಗೆದಿದ್ದಾರೆ. ಆದ್ರೆ ಆಗ ಪೊದೆಯಿಂದ ಜಿಗಿದ ಅಳಿಯ ವಿಶ್ ಮಾಡಿದ್ದಾರೆ. ಆದ್ರೆ ಅಷ್ಟರಲ್ಲಿ ರಿಚರ್ಡ್ ಡೆನ್ನಿಸ್ ಗುಂಡು ಹಾರಿಸಿ ಆಗಿತ್ತು. ಅದು ಕ್ರೀಸ್ಟೋಫರ್ ಬರ್ಗನ್ ಅವರ ಎದೆಯನ್ನೇ ಸೀಳಿ, ಹೃದಯಕ್ಕೆ ನಾಟಿದೆ. ಇದರಿಂದ ಅವರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಇದೊಂದು ಆಕಸ್ಮಿಕ ಘಟನೆಯಾದ್ದರಿಂದ ಯಾವುದೇ ರೀತಿಯ ಕ್ರಿಮಿನಲ್ ಕೇಸ್ ಹಾಕಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Contact Us for Advertisement

Leave a Reply