ಅಯೋಧ್ಯೆ ವಿಚಾರಣೆಗೆ ಮತ್ತೆ `ಸುಪ್ರೀಂ’ ಡೆಡ್ ಲೈನ್..!

ಅಯೋಧ್ಯೆಯ ವಿವಾದದ ವಿಚಾರಣೆ ಅಕ್ಟೋಬರ್ 18ರೊಳಗೆ ಮುಗಿಯಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಮತ್ತೊಮ್ಮೆ ಸೂಚಿಸಿದ್ದಾರೆ. ಅಲ್ಲದೆ ಅ.18ರೊಳಗೆ ವಾದ-ಪ್ರತಿವಾದವನ್ನು ಮುಗಿಸುವಂತೆ ಹಿಂದೂ-ಮುಸ್ಲಿಂ ಸಂಘಟನೆಗಳಿಗೂ ಸೂಚಿಸಲಾಗಿದೆ. ಅಯೋಧ್ಯೆ ವಿಚಾರವಾಗಿ ಸುಪ್ರೀಂಕೋರ್ಟ್‍ನಲ್ಲಿ ನಿರಂತರವಾಗಿ ವಿಚಾರಣೆ ನಡೆಯುತ್ತಿದ್ದು, ಇವತ್ತು 32ನೇ ದಿನಕ್ಕೆ ಕಾಲಿಟ್ಟಿದೆ. ಇವತ್ತೂ ಕೂಡ ನ್ಯಾಯಾಲಯಕ್ಕೆ ಹಾಜರಾದ ಹಿಂದೂ ಹಾಗೂ ಮುಸ್ಲಿಂ ಪರ ವಕೀಲರು ಎಂದಿನಂತೆ ತಮ್ಮ ವಾದ ಮಂಡಿಸಿದ್ರು. ಇದೇ ವೇಳೆ ಮತನಾಡಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್, ಅಕ್ಟೋಬರ್ 18ರೊಳಗೆ ವಾದ-ಪ್ರತಿವಾದ ಮುಗಿಯಬೇಕು. ನಂತರ 4 ವಾರಗಳಲ್ಲಿ ತೀರ್ಪು ಬರೆಯಲಾಗುತ್ತೆ. ಅದು ಅಷ್ಟೊಂದು ಸುಲಭದ ಮಾತಲ್ಲ. 4 ವಾರಗಳಲ್ಲಿ ತೀರ್ಪು ಬರೆಯೋದೇ ಒಂದು ಚಮತ್ಕಾರವಿದ್ದಂತೆ ಎಂದಿದ್ದಾರೆ.

Contact Us for Advertisement

Leave a Reply