ರಷ್ಯಾ‌-ಯುಕ್ರೇನ್ ಸಂಘರ್ಷದಲ್ಲಿ ಝೆಲೆನ್ಸ್ಕಿ ಪಡೆಗೆ ಕೊಂಚ ಮುನ್ನಡೆ!

masthmagaa.com:

ರಷ್ಯಾ ವಿರುದ್ಧ ಬಿರುಸಿನ ಪ್ರತಿದಾಳಿ ಮಾಡ್ತಿರೊ ಯುಕ್ರೇನ್‌, ಬಖ್ಮುತ್‌ ಪ್ರಾಂತ್ಯದ Klishchiivka ನಗರವನ್ನ ಮರು ವಶಪಡಿಸಿಕೊಂಡಿರೋದಾಗಿ ತಿಳಿಸಿದೆ. ಈ ಕುರಿತು ಯುಕ್ರೇನ್‌ನ ಮಿಲಿಟರಿ ಗ್ರೌಂಡ್‌ ಪಡೆಯ ಕಮಾಂಡರ್‌ ಒಲೆಕ್ಸಾಂಡ್ರ ಸಿರ್‌ಸ್ಕಿ ಮಾಹಿತಿ ನೀಡಿದ್ದಾರೆ. ಈ ವಿಜಯವನ್ನ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಪ್ರಶಂಸಿಸಿದ್ದಾರೆ. ತಮ್ಮ ಯೋಧರಿಗೆ ವೆಲ್‌ಡನ್‌ ಅಂತ ಹೇಳಿದ್ದು, ಯುಕ್ರೇನ್‌ ಪ್ರತಿದಾಳಿಗೆ ಹೊಸ ಯೋಜನೆಗಳನ್ನ ಹಾಕಿಕೊಳ್ತಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ Klishchiivka ನಗರವನ್ನ ರಷ್ಯಾ ಇದೇ ವರ್ಷ ಜನವರಿಯಲ್ಲಿ ವಶಪಡಿಸಿಕೊಂಡಿತ್ತು. ಬಖ್ಮುತ್‌ ನಗರದ ದಕ್ಷಿಣ ಭಾಗದಲ್ಲಿರೊ ಈ ನಗರ ಯುದ್ಧ ತಂತ್ರದ ಪ್ರಮುಖ ಕೇಂದ್ರವಾಗಿತ್ತು. ಇದೀಗ ಈ ನಗರವನ್ನ ಯುಕ್ರೇನ್‌ ಮರು ವಶಪಡಿಸಿಕೊಂಡಿದ್ದು, ಈ ಪ್ರದೇಶದಲ್ಲಿ ರಷ್ಯಾಗೆ ಹಿನ್ನಡೆಯಾಗಿದೆ.

 

-masthmagaa.com

Contact Us for Advertisement

Leave a Reply