ಜಮ್ಮು-ಕಾಶ್ಮೀರದಲ್ಲಿ ಮೇಘ ಸ್ಫೋಟ.. ಹಲವೆಡೆ ಪ್ರವಾಹ..!

masthmagaa.com:

ಕರ್ನಾಟಕದಲ್ಲಿ ಮಳೆ ಆರ್ಭಟ ಕಮ್ಮಿಯಾದ್ರೂ ಉತ್ತರ ಭಾರತದ ಹಲವೆಡೆ ಧಾರಾಕಾರವಾಗಿ ಸುರೀತಿರೋ ಮಳೆ ಭಾರಿ ಅವಾಂತರಗಳನ್ನ ಸೃಷ್ಟಿಸಿದೆ. ಜಮ್ಮು ಕಾಶ್ಮೀರದ ಕಿಶ್ತ್​ವಾರ್​ ಜಿಲ್ಲೆಯಲ್ಲಿ ಮೇಘಸ್ಫೋಟ ಉಂಟಾಗಿ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ. ಅವಶೇಷಗಳ ಅಡಿ ಸಿಲುಕಿದ್ದ 17 ಜನರನ್ನ ರಕ್ಷಿಸಲಾಗಿದೆ. 30ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. 8 ಮನೆಗಳಿಗೆ ಹಾನಿಯಾಗಿದೆ. ಎಸ್​ಡಿಆರ್​ಎಫ್​ ಮತ್ತು ಭಾರತೀಯ ಸೇನೆಯ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗ್ತಿದೆ. ಹಿಂದೂಗಳ ಪವಿತ್ರ ದೇವಾಲಯವಾದ ಜಮ್ಮು ಕಾಶ್ಮೀರದ ಅಮರನಾಥ ಗುಹೆ ಬಳಿಯೂ ಮೇಘಸ್ಪೋಟ ಉಂಟಾಗಿ ದಿಢೀರ್ ಪ್ರವಾಹ ಬಂದಿದೆ. ಭಾರಿ ಮಳೆ ಹಿನ್ನಲೆ ಚಿನಾಬ್​ ನದಿ ಉಕ್ಕಿ ಹರಿತೀದೆ. ಹಿಮಾಚಲ ಪ್ರದೇಶದಲ್ಲಿ ದಿಢೀರ್​ ಪ್ರವಾಹ ಉಂಟಾಗಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ, 7 ಜನ ನಾಪತ್ತೆಯಾಗಿದ್ಧಾರೆ. 25 ವರ್ಷದ ಮಹಿಳೆ ಮತ್ತು ಆಕೆಯ ಮಗು ಕೂಡ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಾಖಂಡ್​​ನಲ್ಲಿ ಭಾರಿ ಮಳೆ ಹಿನ್ನೆಲೆ ಗಂಗಾ ನದಿ ಹರಿವಿನ ಮಟ್ಟ ಹೆಚ್ಚಾಗಿದೆ. ಹರಿಯಾಣದಲ್ಲೂ ಭಾರಿ ಮಳೆಯಾಗಿದೆ.

-masthmagaa.com

Contact Us for Advertisement

Leave a Reply