BIG BREAKING: ರಾಜ್ಯದಲ್ಲಿ ನವೆಂಬರ್​ 17ರಿಂದ ಕಾಲೇಜುಗಳು ಆರಂಭ

masthmagaa.com:

ಕೊರೋನಾ ಹಾವಳಿಯಿಂದ ರಾಜ್ಯದಲ್ಲಿ ಬಂದ್ ಆಗಿದ್ದ ಡಿಗ್ರಿ ಕಾಲೇಜುಗಳು ಯಾವಾಗ ಆರಂಭವಾಗುತ್ತೆ ಅನ್ನೋದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ನವೆಂಬರ್ 17ರಿಂದ ಪದವಿಪೂರ್ವ, ಸ್ನಾತಕೋತ್ತರ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳು ಆರಂಭವಾಗಲಿದೆ ಅಂತ ಡಿಸಿಎಂ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್​ ನಾರಾಯಣ್ ತಿಳಿಸಿದ್ದಾರೆ. ಆದ್ರೆ ಕಾಲೇಜಿಗೆ ಬರಲು ಇಚ್ಛಿಸುವವರು ಪೋಷಕರಿಂದ ಲಿಖಿತ ಅನುಮತಿಯನ್ನು ಪಡೆಯಬೇಕು. ಇದಕ್ಕೆ ಒಪ್ಪದವರಿಗೆ ಆನ್​ಲೈನ್ ಕ್ಲಾಸ್ ಇರುತ್ತದೆ. ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಯುಜಿಸಿ ಮಾರ್ಗಸೂಚಿ, ಕೊರೋನಾ ನಿಯಂತ್ರಣಕ್ಕೆ ಇರುವ ನಿಯಮ ಮತ್ತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತೆ ಅಂತ ಸಚಿವರು ತಿಳಿಸಿದ್ದಾರೆ. ಪ್ರತಿ ಕಾಲೇಜಿನಲ್ಲಿ ಟಾಸ್ಕ್ ಫೋರ್ಸ್​ ಇರುತ್ತದೆ. ಕೊರೋನಾಗೆ ಸಂಬಂಧಿಸಿದಂತೆ ಈ ಟಾಸ್ಕ್ ಫೋರ್ಸ್​ ನಿಯಮಗಳನ್ನು ಕೈಗೊಳ್ಳುತ್ತದೆ. ಹಾಸ್ಟೆಲ್​ಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತದೆ.

-masthmagaa.com

Contact Us for Advertisement

Leave a Reply