ಈ ನೆಲದ ಕಾನೂನನ್ನ ಕೇಂದ್ರ ಸರ್ಕಾರ ಅನುಸರಿಸಬೇಕು: ಸುಪ್ರೀಂಕೋರ್ಟ್‌

masthmagaa.com:

ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಸರ್ಕಾರದ ನಡುವೆ ಉನ್ನತ ಸ್ಥಾನಗಳ ನೇಮಕಾತಿ ವಿಚಾರದಲ್ಲಿ ಜಟಾಪಟಿ ನಡೀತಾ ಇದೆ. ಇದೀಗ ನ್ಯಾಯಾಧೀಶರ ನೇಮಕ ವಿಳಂಬ ಮಾಡ್ತಿರೋದಕ್ಕೆ ಸರ್ಕಾರದ ವಿರುದ್ಧ ಸುಪ್ರೀಂ ಅಸಮಾಧಾನ ವ್ಯಕ್ತಪಡಿಸಿದೆ. ಉನ್ನತ ನ್ಯಾಯಧೀಶರನ್ನ ಆಯ್ಕೆ ಮಾಡೋ ಕೊಲೊಜಿಯಂ ಸಿಸ್ಟಮ್‌ ಈ ನೆಲದ ಕಾನೂನು, ಕೇಂದ್ರ ಸರ್ಕಾರ ಅದನ್ನ ಫಾಲೋ ಮಾಡ್ಬೇಕು ಅಂತ ಸುಪ್ರೀಂಕೋರ್ಟ್‌ ಹೇಳಿದೆ. ಜಡ್ಜ್‌ಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು ಮಾಡಿದ್ದ ಹೆಸರುಗಳನ್ನ ಕೇಂದ್ರ ಸರ್ಕಾರ ಇನ್ನು ಅನುಮೋದಿಸಿಲ್ಲ. ಹಾಗೂ ಜಡ್ಜ್‌ಗಳ ನೇಮಕದಲ್ಲಿ ಲೇಟ್‌ ಮಾಡ್ತಾ ಇದೆ ಅಂತ ಸುಪ್ರೀಂಕೋರ್ಟ್‌ ಅಸಮಧಾನ ವ್ಯಕ್ತ ಪಡಿಸಿದೆ. ಇತ್ತೀಚೆಗೆ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಕೊಲಿಜಿಯಂ ಸಿಸ್ಟಮ್‌ ಸರಿ ಇಲ್ಲ, ತಮಗೆ ಬೇಕಾದವರನ್ನ ನೇಮಕ ಮಾಡಲಾಗುತ್ತೆ ಅಂತ ಆರೋಪಿಸಿದ್ರು. ಈ ಆರೋಪವನ್ನ ಕೋರ್ಟ್‌ ತಿರಸ್ಕರಿಸಿದ್ದು, ನ್ಯಾಯಾಂಗಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನ ತೆಗೆದುಕೊಳ್ಳೋಕೆ ನಮ್ಮ ಮೇಲೆ ಒತ್ತಡ ಹೇರ್ಬೇಡಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply