ಎನ್​ಡಿಎ ತೊರೆಯಬಾರದಿತ್ತು..! ಸೋತ ಬಳಿಕ ಬುದ್ಧಿ ಕಲಿತ್ರಾ ನಾಯ್ಡು..?

ಲೋಕಸಭೆ ಹಾಗೂ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಪಶ್ಚಾತ್ತಾಪ ಆಗಿದೆಯಂತೆ. ನಿನ್ನೆ ವಿಶಾಖಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಎನ್‌ಡಿಎ ಒಕ್ಕೂಟದಿಂದ ಹೊರಬಂದು ಬಿಜೆಪಿ ಜತೆಗಿನ ಸ್ನೇಹ ಅಂತ್ಯಗೊಳಿಸಿದ್ದು ನಾನು ಮಾಡಿದ ದೊಡ್ಡ ತಪ್ಪು ಎಂದಿದ್ದಾರೆ. ಅಲ್ಲದೆ ನಾನು ಆಂಧ್ರಪ್ರದೇಶದಕ್ಕೆ ವಿಶೇಷ ಸ್ಥಾನಮಾನ ನೀಡಲು ಹಿಂದೇಟು ಹಾಕಿದ್ದರಿಂದ ಕೇಂದ್ರದ ಎನ್​ಡಿಎ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದೆ. ಎನ್‌ಡಿಎದಿಂದ ಹೊರಬಂದದ್ದು ಟಿಡಿಪಿಗೆ ಚುನಾವಣಾ ದೃಷ್ಟಿಯಿಂದ ದೊಡ್ಡ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಒಂದ್ವೇಳೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಸಿದ್ದರೆ ಪಕ್ಷದ ಕಥೆಯೇ ಬೇರೆ ಇರುತ್ತಿತ್ತು. ಇನ್ಮುಂದಾದ್ರೂ ಇಂತಹ ತಪ್ಪುಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

 

Contact Us for Advertisement

Leave a Reply