ಕಾಮನ್‌ವೆಲ್ತ್‌ ಗೇಮ್ಸ್‌ 2022: ಭಾರತಕ್ಕೆ ಮತ್ತೆ 2 ಬೆಳ್ಳಿ!

masthmagaa.com:

9ನೇ ದಿನದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತ ಇಂದು 2 ಬೆಳ್ಳಿ ಪದಕಗಳನ್ನ ಗೆದ್ದಿದೆ. ಪ್ರಿಯಾಂಕ ಗೋಸ್ವಾಮಿ 10,000 ಮೀಟರ್‌ ರೇಸ್‌ ವಾಕ್‌ನಲ್ಲಿ ಬೆಳ್ಳಿ ಪದಕ ಮುಡಗೇರಿಸಿಕೊಂಡಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಈ ಈವೆಂಟ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ. ಹಾಗೂ ಸ್ಟೀಪಲ್‌ಚೇಸ್‌ ಅಂದ್ರೆ ನೀರಿನ ಹಳ್ಳ, ಸಣ್ಣ ಗುಂಡಿ ಮತ್ತು ಬೇಲಿಗಳಂತಹ ಅಡೆತಡೆಗಳಿರೊ ಹಾದಿಯಲ್ಲಿ ಓಡೋದು. 3000 ಮೀಟರ್‌ ಸ್ಟೀಪಲ್‌ಚೇಸ್‌ನಲ್ಲಿ ಭಾರತದ ಅವಿನಾಶ್‌ ಮುಕುಂದ್‌ ಕೂಡ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ 9 ಚಿನ್ನ, 10 ಬೆಳ್ಳಿ ಹಾಗೂ 9 ಕಂಚಿನೊಂದಿಗೆ 28 ಪದಕಗಳನ್ನ ಭಾರತ ತನ್ನದಾಗಿಸಿಕೊಂಡಿದೆ.

-masthmagaa.com

Contact Us for Advertisement

Leave a Reply