ಸುಮಲತಾ ಬೆಂಬಲಕ್ಕಾಗಿ ಮುಗಿಬಿದ್ದ ಕೈ-ಕಮಲ..!

ನಿನ್ನೆಯಷ್ಟೇ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದ ಮಂಡ್ಯ ಸಂಸದೆ ಸುಮಲತಾ ಇವತ್ತು ಕೆ.ಆರ್.ಪೇಟೆಯಲ್ಲಿ ಜನಸಂಪರ್ಕ ಸಭೆ ನಡೆಸಲಿದ್ದಾರೆ. ಆದ್ರೆ ಇದಕ್ಕೂ ಮುನ್ನವೇ ಸುಮಲತಾ ಬೆಂಬಲ ಪಡೆಯಲು ಟಿಕೆಟ್ ಆಕಾಂಕ್ಷಿಗಳಿಂದ ಲಾಬಿ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಕೆ.ಬಿ ಚಂದ್ರಶೇಖರ್, ಎಲ್ಲರೂ ಸಭೆಯಲ್ಲಿ ಭಾಗಿಯಾಗಬೇಕು ಎಂದು ಕರೆಕೊಟ್ಟಿದ್ದಾರೆ. ಅನರ್ಹ ಶಾಸಕ ಕೆ.ಸಿ ನಾರಾಯಣಗೌಡ ಕೂಡ ಸುಮಲತಾ ಬೆಂಬಲ ಪಡೆಯಲು ಸರ್ಕಸ್ ಮಾಡ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸುಮಲತಾ ವಿರುದ್ಧ ಕಾಂಗ್ರೆಸ್‍ನ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Contact Us for Advertisement

Leave a Reply