ಮಕ್ಕಳ ದಿನಾಚರಣೆ, ನೆಹರೂಗೆ ನಮನ: ಸಚಿವರು, ಸ್ಪೀಕರ್ ಗೈರಿಗೆ ಕೈ ಕೆಂಡ

masthmagaa.com:

ಇವತ್ತು ದೇಶದ ಮೊದಲ ಪ್ರಧಾನಿ ಜವಾಹರ್​ ಲಾಲ್ ನೆಹರೂ 132ನೇ ಜಯಂತಿ.. ಕಾಂಗ್ರೆಸ್ ಅರ್ಧಕ್ಷೆ ಸೋನಿಯಾ ಗಾಂಧಿ ದೆಹಲಿಯ ಶಾಂತಿವನದಲ್ಲಿರೋ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ರು. ಇನ್ನು ಪ್ರಧಾನಿ ಮೋದಿ ಸೇರಿದಂತೆ ಹಲವಾರು ಗಣ್ಯರು ದೇಶದ ಮೊದಲ ಪ್ರಧಾನಿಯನ್ನು ವಿವಿಧ ರೀತಿಯಲ್ಲಿ ನಮಿಸಿದ್ದಾರೆ. ಇನ್ನು ಇದ್ರ ಅಂಗವಾಗಿ ಇಡೀ ದೇಶದಾದ್ಯಂತ ಮಕ್ಕಳ ದಿನ ಆಚರಿಸಲಾಗಿದೆ. 1954ರಲ್ಲಿ ವಿಶ್ವಸಂಸ್ಥೆ ನವೆಂಬರ್ 20ನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಘೋಷಿಸಿತು. ಅದರಂತೆ ಭಾರತ ಕೂಡ ನವೆಂಬರ್ 20ನ್ನು ಮಕ್ಕಳ ದಿನವನ್ನಾಗಿ ಆಚರಿಸೋಕೆ ಶುರು ಮಾಡ್ತು. ಆದ್ರೆ 1964ರಲ್ಲಿ ನೆಹರೂ ವಿಧಿವಶರಾದ ಬಳಿಕ ಅವರಿಗೆ ಗೌರವ ಸಲ್ಲಿಸಲು ಅವರ ಜನ್ಮದಿನದಂದೇ ಮಕ್ಕಳ ದಿನಾಚರಣೆ ಆಚರಿಸಲು ಸಂಸತ್​ನಲ್ಲಿ ಅವಿರೋಧವಾಗಿ ನಿರ್ಣಯ ಅಂಗೀಕರಿಸಲಾಯ್ತು.

ಇನ್ನು ಪ್ರತಿ ವರ್ಷ ಸಂಸತ್ ಭವನದ ಸೆಂಟ್ರಲ್ ಹಾಲ್​ನಲ್ಲಿ ಈ ದಿನದಂದು ನಮನ ಸಲ್ಲಿಸಲಾಗುತ್ತೆ. ಆದ್ರೆ ಈ ವರ್ಷ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಸೇರಿದಂತೆ ಯಾರೂ ಭಾಗಿಯಾಗಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್, ಇದಕ್ಕಿಂತ ಘೋರ ಬೇರೆ ಏನಾದ್ರೂ ಇದೆಯಾ ಅಂತ ಪ್ರಶ್ನಿಸಿದೆ.

-masthmagaa.com

Contact Us for Advertisement

Leave a Reply