ಅಜ್ಜಿ ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು: ರಾಹುಲ್ ಗಾಂಧಿ

masthmagaa.com:

ದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಒಂದು ತಪ್ಪು ನಿರ್ಧಾರ ಅಂತ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕದ ಕಾರ್ನೆಲ್ ವಿವಿಯ ಪ್ರೊಫೆಸರ್ ಮತ್ತು ಭಾರತದ ಮಾಜಿ ಆರ್ಥಿಕ ಸಲಹೆಗಾರರಾಗಿದ್ದ ಕೌಶಿಕ್ ಬಸು ಅವರೊಂದಿಗೆ ಮಾತನಾಡಿದ್ದಾರೆ.

ಈ ವೇಳೆ 1975ರಿಂದ 77ರವರೆಗೆ ತುರ್ತುಪರಿಸ್ಥಿತಿ ಹೇರಿದ್ದು ಖಂಡಿತ ತಪ್ಪು. ಆಗ ಸಾಂವಿಧಾನಿಕ ಹಕ್ಕುಗಳನ್ನು ತೆಗೆದುಹಾಕಿ, ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಹಲವಾರು ವಿಪಕ್ಷ ನಾಯಕರನ್ನು ಅರೆಸ್ಟ್ ಕೂಡ ಮಾಡಲಾಗಿತ್ತು. ಇವೆಲ್ಲಾ ತಪ್ಪಾದ್ರೂ ಕೂಡ ಸದ್ಯದ ಪರಿಸ್ಥಿತಿ ಆ ಪರಿಸ್ಥಿತಿಗಿಂತಲೂ ತುಂಬಾ ಭಿನ್ನವಾಗಿದೆ. ಕಾಂಗ್ರೆಸ್ ಯಾವತ್ತೂ ಕೂಡ ಸಾಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಿಸಲು ಯತ್ನಿಸಲಿಲ್ಲ. ಆದ್ರೆ ಬಿಜೆಪಿ  ಇಂದು ಎಲ್ಲಾ ಸಾಂವಿಧಾನಿಕ ಸಂಸ್ಥೆಗಳಲ್ಲಿ ತಮ್ಮವರನ್ನು ಸೇರಿಸುತ್ತಿದೆ. ಹೀಗಾಗಿ ನಾವು ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿದ್ರೂ ಕೂಡ ಅವರ ಜನರನ್ನು ಸಾಂವಿಧಾನಿಕ ಸ್ಥಾನಗಳಿಂದ ತೆಗೆದು ಹಾಕಲು ಸಾಧ್ಯವಿಲ್ಲ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ.

ಅಷ್ಟೇ ಅಲ್ಲ.. ಪ್ರಜಾಪ್ರಭುತ್ವ ಸರಿಯಾಗಿ ಕೆಲಸ ಮಾಡಬೇಕೆಂದ್ರೆ ಅಲ್ಲಿರೋ ಸಾಂವಿಧಾನಿಕ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡಬೇಕು. ಆದ್ರೆ ಭಾರತದಲ್ಲಿ ಆರ್​ಎಸ್​​​ಎಸ್​ ಅನ್ನೋ ಒಂದು ಸಂಸ್ಥೆ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಿದೆ ಅಂತಲೂ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply