ರೆಡ್‌ ನೋಟಿಸ್‌ನಿಂದ ಮೆಹುಲ್‌ ಚೋಕ್ಸಿ ಹೆಸರನ್ನ ಕೈಬಿಟ್ಟ ಇಂಟರ್‌ಪೋಲ್‌ ! ಸಿಡಿದು ಬಿದ್ದ ಕಾಂಗ್ರೆಸ್

masthmagaa.com:

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂಪಾಯಿ ಪಂಗನಾಮ ಹಾಕಿದ್ದಾರೆ ಅನ್ನೋ ಆರೋಪ ಹೊತ್ತಿರೋ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಹೆಸರನ್ನು ಇಂಟರ್‌ಪೋಲ್‌ ತನ್ನ ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ತೆಗೆದು ಹಾಕಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಬಿಜೆಪಿ ಹಾಗೂ ಮೋದಿ ವಿರುದ್ದ ಆಕ್ರೋಶ ಹೊರಹಾಕಿದೆ. ವಿರೋಧ ಪಕ್ಷದವರ ವಿರುದ್ಧ ಮಾತ್ರ ED ಹಾಗೂ ಸಿಬಿಐ. ತಮ್ಮ ಮಿತ್ರರನ್ನ ಹಾಗೆ ಬಿಟ್ಟುಕಳಿಸುತ್ತಾರೆ ಅಂತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಇನ್ನು ಐದು ವರ್ಷಗಳ ಹಿಂದೆ ದೇಶದಿಂದ ಓಡಿಹೋಗಿರುವ ತಮ್ಮ ಹಳೆಯ ಸ್ನೇಹಿತನಿಗೆ ಈಗ ಸಹಾಯ ಮಾಡ್ದೆ ಮೋದಿ ಹೇಗಿರ್ತಾರೆ ಅಂತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಬೆಂಕಿ ಉಗುಳಿದ್ದಾರೆ. ಅಂದ್ಹಾಗೆ ಇಂಟರ್‌ಪೋಲ್‌ ತಾನು ಕಾರ್ಯಾಚರಣೆ ಮಾಡ್ತಿರೋ 192 ಸದಸ್ಯ ರಾಷ್ಟ್ರಗಳಿಗೆ ಆರೋಪಿ ತಮ್ಮ ದೇಶದಲ್ಲಿ ತಲೆಮರೆಸಿಕೊಂಡಿದ್ದಲ್ಲಿ ಅವರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸೂಚಿಸುವ ಆದೇಶ ಕೊಡುತ್ತೆ. ಇದನ್ನೇ ರೆಡ್‌ ಕಾರ್ನರ್‌ ನೋಟಿಸ್‌ ಅನ್ನೋದು. ಆ ಪಟ್ಟಿಯಿಂದ ಈಗ ಮೆಹುಲ್‌ ಚೋಕ್ಸಿಯನ್ನ ಕೈ ಬಿಡಲಾಗಿದೆ.

-masthmagaa.com

Contact Us for Advertisement

Leave a Reply