ಕಚ್ಚಾಟದ ನಡುವೆ ಕಾಂಗ್ರೆಸ್ ಟಿಕೆಟ್ ಫೈನಲ್..! ಯಾರ್ಯಾರಿಗೆ ಟಿಕೆಟ್..?

15 ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಇವತ್ತು ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೀತು. ಈ ವೇಳೆ ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರಾದ ಕೆ.ಹೆಚ್ ಮುನಿಯಪ್ಪ ಮತ್ತು ಬಿ.ಕೆ ಹರಿಪ್ರಸಾದ್ ಕೆಂಡಕಾರಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಮತ್ತು ಕೆ.ಎಚ್ ಮುನಿಯಪ್ಪ ನಡುವೆ ಏಕವಚನದಲ್ಲಿಯೇ ಮಾತಿನ ಯುದ್ಧವೂ ನಡೆದಿದೆ. ಆದ್ರೆ ಇವೆಲ್ಲದರ ನಡುವೆಯೂ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಹಾಗಾದ್ರೆ ಯಾವ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡಲಾಗಿದೆ ಅನ್ನೋದನ್ನ ನೋಡೋದಾದ್ರೆ,

ಕೆ.ಆರ್.ಪೇಟೆ, ಕೆ.ಬಿ. ಚಂದ್ರಶೇಖರ್
ಹುಣಸೂರು, ಹೆಚ್.ಬಿ.ಮಂಜುನಾಥ್
ಹೊಸಕೋಟೆ, ಪದ್ಮಾವತಿ ಸುರೇಶ್
ಕೆ.ಆರ್. ಪುರಂ, ನಾರಾಯಣಸ್ವಾಮಿ
ಕಾಗವಾಡ, ಪ್ರಕಾಶ್ ಹುಕ್ಕೇರಿ
ಗೋಕಾಕ್, ಲಖನ್ ಜಾರಕಿಹೊಳಿ
ರಾಣೆಬೆನ್ನೂರು, ಕೆ.ಬಿ.ಕೋಳಿವಾಡ
ವಿಜಯನಗರ, ಸೂರ್ಯನಾರಾಯಣ ರೆಡ್ಡಿ
ಹಿರೇಕೆರೂರು, ಬನ್ನಿಕೋಡ್
ಮಹಾಲಕ್ಷ್ಮೀ ಲೇಔಟ್, ಶಿವರಾಜು

Contact Us for Advertisement

Leave a Reply