ʻಐಡಿ ಆರೋಪʼಕ್ಕೆ ಧುಮುಕಿದ ಕುಮಾರಸ್ವಾಮಿ! ಇದು ಗಂಭೀರ ಎಂದು ಬಿಜೆಪಿ ವಿರುದ್ದ ವಾಗ್ದಾಳಿ!

masthmagaa.com:

ಮತದಾರರ ಮಾಹಿತಿ ಕಳುವಿನ ಆರೋಪಕ್ಕೆ ಸಂಬಂಧ ಪಟ್ಟಂತೆ ಕಾಂಗ್ರೆಸ್‌ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು ತನಿಖೆಗೆ ಆದೇಶ ನೀಡಲಾಗಿದೆ. ರಾಜ್ಯ ಚುನಾವಣಾ ಆಯೋಗ ಈ ಆದೇಶ ನೀಡಿದೆ. ಬಿಬಿಎಂಪಿ, ಕಮಿಷನರ್ ಗೆ ಈ ಬಗ್ಗೆ ಕೆಲ ಮಾಹಿತಿ ಇದೆ. ಮಾಹಿತಿ ಕಳ್ಳತನದ ಬಗ್ಗೆ ನಮಗೆ ಆತಂಕವಿದೆ. ಅದನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ಅಂತಿಮವಾಗಿ, ಪೊಲೀಸ್ ತನಿಖೆ ಮತ್ತು ನಮ್ಮ ವಿಭಾಗೀಯ ಆಯುಕ್ತರ ವಿಚಾರಣೆ ಬಳಿಕ ಸತ್ಯಾಂಶ ಹೊರಬರಲಿದೆ ಅಂತ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದಾರೆ. ಇತ್ತ ಈ ಅಖಾಡಕ್ಕೆ ಹೆಚ್‌ಡಿ ಕುಮಾರಸ್ವಾಮಿ ಕೂಡ ಧುಮುಕಿದ್ದು ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದ್ದಾರೆ. ಈ ಆರೋಪ ನಿಜಕ್ಕೂ ಗಂಭೀರ ವಿಚಾರ. ಈ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಮ್ಮ ಪಕ್ಷದಿಂದ ದೂರು ಕೊಡಲಿದ್ದೇವೆ ಅಂತ ಹೇಳಿದ್ದಾರೆ. ಇತ್ತ ಈ ಹಗರಣದ ಕುರಿತು ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮೊಯಿ ಚಿಲುಮೆ ಸಂಸ್ಥೆಯು ಮತದಾರರ ಪಟ್ಟಿ ಪರಿಷ್ಕರಣಿಯ ಯಾವುದೇ ಜವಾಬ್ದಾರಿಯನ್ನು ನೀಡಿಲ್ಲ, ಕೇವಲ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಆದೇಶ ನೀಡಲಾಗಿರುತ್ತದೆ ಅಂತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply