ಇಂಗ್ಲಿಷ್ ಬರಲ್ಲ ಅನ್ಸುತ್ತೆ, ಟ್ರಾನ್ಸ್​​ಲೇಷನ್ ಮಾಡಿ: ಸಲ್ಮಾನ್ ಖುರ್ಷೀದ್ ಸಿಡಿಮಿಡಿ

masthmagaa.coom:

ತಮ್ಮ ಪುಸ್ತಕ ಸನ್‌ರೈಸ್ ಒವರ್ ಅಯೋಧ್ಯಾ: ನೇಷನ್‌ಹುಡ್ ಇನ್‌ ಅವರ್‌ ಟೈಮ್ಸ್​​​ಗೆ ಟೀಕೆ ಕೇಳಿ ಬಂದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷೀದ್ ಪ್ರತಿಕ್ರಿಯಿಸಿದ್ದಾರೆ. ನಾನು ಇಂಗ್ಲಿಷ್​​​ನಲ್ಲಿ ಪುಸ್ತಕ ಬರೆದಿದ್ದೀನಿ. ಸಿಮಿಲರ್ ಅನ್ನೋ ಪದ ಯೂಸ್ ಮಾಡಿದ್ದೀನಿ. ಸೇಮ್ ಅನ್ನೋ ಪದ ಯೂಸ್ ಮಾಡಿಲ್ಲ.. ಟೀಕಿಸುವವರು ಇಂಗ್ಲೀಷ್​​ನಲ್ಲಿ ವೀಕ್ ಇರಬೇಕು. ಅನುವಾದ ಮಾಡಿದ್ರೆ ಅಂಥವರಿಗೆ ಕ್ಲಾರಿಟಿ ಸಿಗಬಹುದು ಅಂತ ಹೇಳಿದ್ದಾರೆ. ಅಂದಹಾಗೆ ಇತ್ತೀಚೆಗೆ ಸಲ್ಮಾನ್ ಖುರ್ಷೀದ್ ಅವರ ಪುಸ್ತಕದಲ್ಲಿ ಹಿಂದುತ್ವ ಮತ್ತು ಉಗ್ರ ಸಂಘಟನೆಗಳು ಎರಡೂ ಒಂದೇ ಅಂತ ಹೇಳಲಾಗಿದೆ ಅಂತ ಬಿಜೆಪಿ ಆರೋಪಿಸಿತ್ತು. ಆದ್ರೆ ಖುರ್ಷೀದ್​ ಈಗ ಒಂದೇ ಅಂತ ನಾನು ಹೇಳಿಲ್ಲ.. ಆ ರೀತಿ ಅಂತ ಹೇಳಿದ್ದೀನಿ ಅಷ್ಟೆ ಅಂತ ಜಾರಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply