ಸಂವಿಧಾನ ದಿನ: ವಂಶರಾಜಕಾರಣದ ವಿರುದ್ಧ ಮೋದಿ ಕೆಂಡ

masthmagaa.com:

ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಪ್ರಧಾನಿ ಮೋದಿ ಇವತ್ತು ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾಡಿದ ಪ್ರಧಾನಿ ಮೋದಿ, ಭಾರತ ದೊಡ್ಡ ಬಿಕ್ಕಟ್ಟಿನತ್ತ ಸಾಗುತ್ತಿದೆ. ಇದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟೋರಿಗೆ ತುಂಬಾ ಚಿಂತೆಯ ವಿಚಾರವಾಗಿದೆ. ಫ್ಯಾಮಿಲಿಯಿಂದ ಪಕ್ಷ, ಫ್ಯಾಮಿಲಿಗಾಗಿ ಪಕ್ಷ.. ನಾನು ಹೆಚ್ಚೇನೂ ಹೇಳಬೇಕಾದ ಅಗತ್ಯವಿದೆಯಾ? ಪಕ್ಷ ಒಂದು ಕುಟುಂಬದಿಂದ ಜನರೇಷನ್​​ಗಳವರೆಗೆ ನಡೆಸುತ್ತೆ ಅಂತಾದ್ರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯ ವಿಚಾರ ಅಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಜಕೀಯ ಪಕ್ಷಗಳನ್ನು ಒಮ್ಮೆ ಗಮನಿಸಿ ಅಂತ ಹೇಳಿದ್ದಾರೆ. ಅಂದಹಾಗೆ ಇವತ್ತಿನ ಸಂವಿಧಾನ ದಿನಾಚರಣೆಯನ್ನು 14 ವಿಪಕ್ಷಗಳು ಒಟ್ಟಾಗಿ ಬಹಿಷ್ಕರಿಸಿದ್ದವು. ಇನ್ನು ಸಂವಿಧಾನ ದಿನ ಸಂಬಂಧ ಟ್ವೀಟ್ ಮಾಡಿರೋ ಪ್ರಧಾನಿ ಮೋದಿ, ಅಂಬೇಡ್ಕರ್​ ಅವರ ಭಾಷಣದ ಪ್ರತಿಯೊಂದನ್ನು ಶೇರ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply