ಕಮ್ಮಿಯಾಗುತ್ತೆ ಅಡುಗೆ ಎಣ್ಣೆ ರೇಟು! ಹೇಗೆ ಗೊತ್ತಾ?

masthmagaa.com:

ಕೆಲವು ಅಡುಗೆ ಎಣ್ಣೆ ಮೇಲಿನ ಆಮದು ಸುಂಕವನ್ನ ಕೇಂದ್ರ ಸರ್ಕಾರ ತೆಗೆದುಹಾಕಿದೆ. ಕಚ್ಚಾ ಸೋಯಬೀನ್, ಸನ್ ಫ್ಲವರ್, ಹಾಗೂ ಪಾಮ್ ಎಣ್ಣೆ ಆಮದು ಮಾಡಿಕೊಂಡಾಗ ಅದರ ಮೇಲೆ 2022ರ ಮಾರ್ಚ್ 01ರ ವರೆಗೆ ಯಾವುದೇ ಕಸ್ಟಮ್ಸ್ ತೆರಿಗೆ ಇರೋದಿಲ್ಲ. ಇದು ಕಚ್ಚಾ ರೂಪದಲ್ಲಿ ತರಿಸಿಕೊಂಡರೆ ಮಾತ್ರ ಅನ್ವಯ ಆಗುತ್ತೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ವಿಪರೀತ ಏರಿಕೆಯಾಗಿತ್ತು. ಅದರ ಮೇಲೆ ಸರ್ಕಾರವೂ ದುಬಾರಿ ಇಂಪೋರ್ಟ್ ಟ್ಯಾಕ್ಸ್ ಹಾಕ್ತಿತ್ತು. ಆದ್ರೆ ಈಗ ಆ ಆಮದು ಸುಂಕವನ್ನ ಕೆಲ ಕಾಲದ ಮಟ್ಟಿಗೆ ತೆಗೆದುಹಾಕಲಾಗಿದೆ. ಸೋ ಈ ಅವಧಿಯಲ್ಲಿ ಪಾಮ್, ಸನ್ ಫ್ಲವರ್ ಹಾಗೂ ಸೋಯಬೀನ್ ಎಣ್ಣೆಯ ರೇಟು ಡೌನ್ ಆಗೋ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply