ಟಿಕ್ ಟಾಕ್ ವಿಲನ್ ಆತ್ಮಹತ್ಯೆ..! 3 ಕೊಲೆ ಮಾಡಿದ್ದ ಪಾಪಿ..!

ಜಾನಿ ದಾದಾ ಮತ್ತು ಟಿಕ್ ಟಾಕ್ ವಿಲನ್ ಎಂದು ಕರೆಸಿಕೊಳ್ಳುತ್ತಿದ್ದ ಅಶ್ವಿನಿ ಕುಮಾರ್ ಉತ್ತರ ಪ್ರದೇಶದ ಸರ್ಕಾರಿ ಬಸ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನನ್ನು ತಾನು ವಿಲನ್ ಎಂದು ಬಿಂಬಿಸಿಕೊಂಡು ಟಿಕ್‍ಟಾಕ್‍ನಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿದ್ದ ಈತ, 3 ಕೊಲೆ ಕೇಸ್‍ಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. 30 ವರ್ಷದ ಈತ ಫೇಸ್‍ಬುಕ್‍ನಲ್ಲೂ ನಾನು ಎಲ್ಲವನ್ನೂ ನಿರ್ನಾಮ ಮಾಡುತ್ತೇನೆ. ಭೂತ ಈಗ ರೆಡಿಯಾಗಿದೆ ಅಂತೆಲ್ಲಾ ಬರೆದುಕೊಳ್ಳುತ್ತಿದ್ದ.

ಸೆಪ್ಟೆಂಬರ್ 27ರಂದು ಆತ ಬಿಜೆಪಿ ನಾಯಕನ 25 ವರ್ಷದ ಪುತ್ರ ಮತ್ತು ಅಳಿಯನನ್ನು ಗುಂಡಿಟ್ಟು ಕೊಂದಿದ್ದ. ಜೊತೆಗೆ ಓರ್ವ ಯುವತಿಯನ್ನೂ ಕೊಲೆಗೈದಿದ್ದ. ಪೊಲೀಸರಿಗೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ ಈತನ ತಲೆಯ ಮೇಲೆ 1 ಲಕ್ಷ ರೂಪಾಯಿ ಇನಾಮು ಘೋಷಿಸಲಾಗಿತ್ತು. 15 ಪೊಲೀಸರ ತಂಡ ಅಶ್ವಿನ್ ಕುಮಾರ್ ನನ್ನು ಒಂದು ವರದಿಂದ ಚೇಸ್ ಮಾಡುತ್ತಿದ್ದರು.

ಪೊಲೀಸರಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ಈತ ಸರ್ಕಾರಿ ಬಸ್ ಏರಿದ್ದ. ಪೊಲೀಸರು ತಡೆದು ಪರಿಶೀಲಿಸುವಾಗ ಗನ್ ತೆಗೆದು ಶೂಟ್ ಮಾಡಿಕೊಂಡಿದ್ದಾನೆ.

Contact Us for Advertisement

Leave a Reply