ಭಾರತದಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ, ನಮೋ ಹೇಳಿದ್ದೇನು..?

masthmagaa.com:

ದೆಹಲಿ: ಭಾರತದಲ್ಲಿಂದು ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ಧಾರೆ. ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಎಲ್ಲರೂ ಲಸಿಕೆ ಯಾವಾಗ ಬರುತ್ತೆ ಅಂತ ಕೇಳ್ತಾನೇ ಇದ್ರು. ಈಗ ಲಸಿಕೆ ಲಭ್ಯವಿದೆ. ಈ ಸುಸಂದರ್ಭದಲ್ಲಿ ದೇಶದ ಎಲ್ಲಾ ಜನತೆಗೆ, ವಿಜ್ಞಾನಿಗಳಿಗೆ ಶುಭಕೋರುತ್ತಿದ್ದೇನೆ ಅಂದ್ರು. ಜೊತೆಗೆ ದೇಶದಲ್ಲಿ ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಇದೇ ಸಂಖ್ಯೆ ಎರಡನೇ ಹಂತದ ವೇಳೆಗೆ 30 ಕೋಟಿಗೆ ಏರಿಕೆಯಾಗಲಿದೆ. ಮೊದಲನೇ ಡೋಸ್ ಪಡೆದವರು 2ನೇ ಡೋಸ್ ಪಡೆಯಲೇಬೇಕು. ಕೇರ್​ಲೆಸ್ ಮಾಡ್ಬೇಡಿ.. ಹಾಗೆಯೇ ಲಸಿಕೆ ಹಾಕಿಸಿಕೊಂಡ ಬಳಿಕವೂ ಮುಜಾಂಗ್ರತೆ ಕ್ರಮಗಳನ್ನು ಮರೆತುಬಿಡಬೇಡಿ.. ಮಾಸ್ಕ್ ಧರಿಸೋದು, ಸಾಮಾಜಿಕ ಅಂತರ ಕಾಯ್ದುಕೊಳ್ಳೋದನ್ನು ಮುಂದುವರಿಸಿ. ವದಂತಿಗಳಿಂದ ಸಾಧ್ಯವಾದಷ್ಟು ದೂರ ಇರಿ ಅಂತ ಜನರಲ್ಲಿ ಮನವಿ ಮಾಡಿದ್ರು.

ಜೊತೆಗೆ ಕಳೆದ ವರ್ಷ ಇದೇ ದಿನ ಭಾರತದ ಮೊದಲ ಅಡ್ವೈಸರಿ ರಿಲೀಸ್ ಮಾಡಿತ್ತು. ಅಂದ್ರೆ ಭಾರತ ಮುಂಜಾಗ್ರತೆಗಳನ್ನು ತೆಗೆದುಕೊಂಡ ದೇಶಗಳ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿತ್ತು. ದೇಶದಲ್ಲಿ ಕೊರೋನಾ ಪತ್ತೆಗೂ ಮುನ್ನವೇ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೆವು ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply