masthmagaa.com:

ಇಡೀ ವಿಶ್ವವನ್ನೇ ಅಲ್ಲಾಡಿಸಿರುವ ಕೊರೋನಾ ವೈರಾಣು ಮಾನವನ ಚರ್ಮದ ಮೇಲೆ ಬರೋಬ್ಬರಿ 9 ಗಂಟೆಗಳ ಕಾಲ ಬದುಕಿರುತ್ತದೆ  ಅಂತ ಜಪಾನ್​ ಸಂಶೋಧಕರು ಪತ್ತೆಹಚ್ಚಿದ್ದಾರೆ. ಈ ಮೂಲಕ ಕೊರೋನಾ ತಗುಲದಂತೆ ತಡೆಯಲು ಜನರು ಪದೇಪದೆ ಕೈ ತೊಳೆದುಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಹೀಗಾಗಿ ಕೊರೋನಾ ಮುಗಿಯುವವರಿಗೆ ಹ್ಯಾಂಡ್​ಶೇಕ್ ಮಾಡದಿರೋದು ಸೇರಿದಂತೆ ಹಲವು ಮುಂಜಾಗ್ರತೆಗಳನ್ನು ವಹಿಸುವುದು ಉತ್ತಮ.

ಅಂದ್ಹಾಗೆ ಜ್ವರಕ್ಕೆ ಕಾರಣವಾಗುವ ವೈರಾಣು ಅಥವಾ ಬ್ಯಾಕ್ಟೀರಿಯಾ ಮಾನವನ ಚರ್ಮದ ಮೇಲೆ 1.8 ಗಂಟೆ ಕಾಲ ಸಕ್ರಿಯವಾಗಿರುತ್ತದೆ. ಆದ್ರೆ ಕೊರೋನಾಗೆ ಕಾರಣವಾಗುವ SARS-CoV-2 ವೈರಸ್‌ 9 ಗಂಟೆಗಳ ಕಾಲ ಸಕ್ರಿಯವಾಗಿರುತ್ತದೆ. ಇದರಿಂದ ಸೋಂಕು ಹರಡುವ ವೇಗ ಹೆಚ್ಚಾಗುತ್ತದೆ ಅಂತ ಕ್ಲಿನಿಕಲ್ ಇನ್ಫೆಕ್ಷಿಯಸ್​ ಡಿಸೀಸಸ್ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ.

ಈ ಅಧ್ಯಯನಕ್ಕಾಗಿ ವಿಜ್ಞಾನಿಗಳು ವ್ಯಕ್ತಿಯು ಮೃತಪಟ್ಟ ಒಂದು ದಿನದ ನಂತರ ಆತನ ಚರ್ಮದ ಮಾದರಿಗಳನ್ನು ಪಡೆದುಕೊಂಡರು. ಈ ವೇಳೆ ಕೊರೋನಾ ವೈರಾಣು ಮಾನವನ ಚರ್ಮದ ಮೇಲೆ 9 ಗಂಟೆಗಳ ಕಾಲ ಬದುಕಿರುತ್ತದೆ ಅನ್ನೋದು ಗೊತ್ತಾಗಿದೆ. ಆದ್ರೆ ಹ್ಯಾಂಡ್ ಸ್ಯಾನಿಟೈಸರ್​ಗಳಲ್ಲಿ ಬಳಸುವ ಎಥನಾಲ್​ನ್ನು ಹಚ್ಚಿಕೊಂಡ 15 ಸೆಕೆಂಡ್​ಗಳಲ್ಲಿ ಕೊರೋನಾ ವೈರಾಣು ಮತ್ತು ಜ್ವರದ ವೈರಾಣು ಎರಡೂ ಕೂಡ ನಿಷ್ಕ್ರಿಯವಾದವು ಅಂತ ಸಂಶೋಧಕರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply