ಮೊಟ್ಟಮೊದಲು ಬಾಹ್ಯಾಕಾಶದಲ್ಲಿ ಕಾಲಿಟ್ಟಿದ್ದ ಅಲೆಕ್ಸ್ ಸಾವು

1960ರ ದಶಕದಲ್ಲೇ ಬಾಹ್ಯಾಕಾಶದಲ್ಲಿ ಮೊಟ್ಟ ಮೊದಲಬಾರಿಗೆ ನಡೆದಾಡಿದ ಗಗನಯಾತ್ರಿ ಅಲೆಕ್ಸ್ ಲಿಯೋನೊವ್ ನಿಧನರಾಗಿದ್ದಾರೆ. 85 ವರ್ಷ ವಯಸ್ಸಾಗಿದ್ದ ಅಲೆಕ್ಸ್, ಮಾಸ್ಕೋದಲ್ಲಿ ಮೃತಪಟ್ಟಿದ್ದಾರೆ. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಅಲೆಕ್ಸ್, ಮಾಸ್ಕೋದ ಬೊರ್ಡೆಂಕೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ ಎಂದು ರಷ್ಯಾದ ರಾಸ್ಕೋಮಾಸ್ ಸ್ಪೇಸ್ ಏಜೆನ್ಸಿ ತಿಳಿಸಿದೆ.

ಸೋವಿಯತ್ ಒಕ್ಕೂಟ 1965ರಲ್ಲಿ ಕೈಗೊಂಡಿದ್ದ ವೊಸ್ಕ್‍ಹಾಡ್ 2 ಅಂತರಿಕ್ಷ ಯೋಜನೆ ಕೈಗೊಂಡಿತ್ತು. ಈ ವೇಳೆ ಅಂದ್ರೆ ಮಾರ್ಚ್ 18ರಂದು ಬಾಹ್ಯಾಕಾಶದಲ್ಲಿ ನೌಕೆಯಿಂದ ಹೊರಬಂದಿದ್ದ ಲಿಯೋನೊವ್ ಸುಮಾರು 12 ನಿಮಿಷ ಸ್ಪೇಸ್‍ವಾಕ್ ಮಾಡಿದ್ದರು.

Contact Us for Advertisement

Leave a Reply