ಕಾಣದ ಶತ್ರು ಜೊತೆ ಹೋರಾಟ; ಹುಷಾರಾಗಿರಿ ಮೋದಿ ವಾರ್ನಿಂಗ್!

masthmagaa.com:

ಇದೇ ವೇಳೆ ಕೊರೋನಾ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ದೇಶದ ಗ್ರಾಮೀಣ ಭಾಗಗಳಿಗೂ ಕೊರೋನಾ ವೇಗವಾಗಿ ಹಬ್ಬುತ್ತಿದ್ದು, ಆದಷ್ಟು ಎಚ್ಚರವಾಗಿರಿ ಅಂತ ಎಚ್ಚರಿಸಿದ್ದಾರೆ. ನಾವು ಕಣ್ಣಿಗೆ ಕಾಣದ ಶತ್ರುವನ್ನು ಎದುರಿಸುತ್ತಿದ್ದೇವೆ. ಅದಕ್ಕೆ ಲಸಿಕೆಯೇ ಆಯುಧ ಅಂದ್ರು. ಎಲ್ಲಾ ಸರ್ಕಾರಗಳು ಕೊರೋನಾ ವಿರುದ್ಧ ಹೋರಾಟಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡ್ತಿವೆ. ಆದ್ರೂ ಕೂಡ ಗ್ರಾಮೀಣ ಭಾಗದ ಜನರಲ್ಲಿ ಈ ಬಗ್ಗೆ ಜಾಗೃತಿ ಮತ್ತು ಪಂಚಾಯತ್ ಸಂಸ್ಥೆಗಳ ಸಹಕಾರ ಕೂಡ ಅತೀ ಅಗತ್ಯ ಅಂತ ಹೇಳಿದ್ದಾರೆ. ಗ್ರಾಮೀಣ ಭಾಗದ ಜನರೂ ಕೂಡ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೊರೋನಾದಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ರಕ್ಷಿಸಿ ಅಂತ ಕರೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply