ಮೊದಲ ಡೋಸ್ ಒಂದು ಲಸಿಕೆ, 2ನೇ ಡೋಸ್ ಮತ್ತೊಂದು ಲಸಿಕೆ

masthmagaa.com:

ಭಾರತ ಸೇರಿದಂತೆ ಬಹುತೇಕ ದೇಶಗಳಲ್ಲಿ ಒಂದೇ ಕಂಪನಿಯ ಕೊರೋನಾ ಲಸಿಕೆಯ ಎರಡು ಡೋಸ್​​ ಹಾಕಲಾಗ್ತಿದೆ. ಆದ್ರೆ ಒಂದು ಡೋಸ್​ ಒಂದು ಕಂಪನಿಯದ್ದು, ಮತ್ತೊಂದು ಡೋಸ್ ಮತ್ತೊಂದು ಕಂಪನಿಯದ್ದು ಹಾಕುವ ಬಗ್ಗೆ ಬ್ರಿಟನ್​ನಲ್ಲಿ ಅಧ್ಯಯನ, ಪ್ರಯೋಗ ನಡೀತಿದೆ. ಈ ಪ್ರಯೋಗವನ್ನ ಕಾಮ್​-ಕಾವ್ ಸ್ಟಡಿ ಅಂತ ಕರೀತಾರೆ. ಆಕ್ಸ್​ಫರ್ಡ್​ ಯುನಿವರ್ಸಿಟಿ ಇದರ ಪ್ರಯೋಗ ನಡೆಸ್ತಿದೆ. ಇದರಲ್ಲಿ ಆಕ್ಸ್​​ಫರ್ಡ್​-ಆಸ್ಟ್ರಾಝೆನೆಕಾ ಲಸಿಕೆಯನ್ನ ಮೊದಲ ಡೋಸ್ ಕೊಡಲಾಗುತ್ತೆ. ನಂತರ ಎರಡನೇ ಡೋಸ್​ ಅನ್ನ ಫೈಝರ್ ಕಂಪನಿಯದ್ದು ಕೊಡಲಾಗುತ್ತೆ. ಎರಡು ಲಸಿಕೆಯ ಮಿಶ್ರಣದಿಂದ ಹೆಚ್ಚು ರಕ್ಷಣೆ ಸಿಗುತ್ತಾ ಅನ್ನೋದನ್ನ ಪತ್ತೆಹಚ್ಚುವ ಪ್ರಯತ್ನ ಇದಾಗಿದೆ. ಇಂತಹ ಮಿಕ್ಸ್ ಅಂಡ್ ಮ್ಯಾಚ್​ಗೆ ಇದೀಗ ಮೊಡೆರ್ನಾ ಮತ್ತು ನೋವಾವಾಕ್ಸ್ ಕಂಪನಿಗಳ ಲಸಿಕೆಯನ್ನ ಕೂಡ ಸೇರಿಸಲಾಗಿದೆ. ಇದರ ಪ್ರಕಾರ ಆಸ್ಟ್ರಾಝೆನೆಕಾ ಅಥವಾ ಫೈಝರ್ ಲಸಿಕೆಯ ಮೊದಲ ಡೋಸ್ ಪಡೆಯುವ ಸ್ವಯಂಸೇವಕರಿಗೆ ಮೊಡೆರ್ನಾ ಅಥವಾ ನೋವಾವಾಕ್ಸ್​ ಕಂಪನಿಯ ಎರಡನೇ ಡೋಸ್ ಹಾಕಲಾಗುತ್ತೆ.

-masthmagaa.com

Contact Us for Advertisement

Leave a Reply