ಕೊರೋನಾಗೂ ಜೀವಿಸೋ ಹಕ್ಕಿದೆ ಎಂದ ಬಿಜೆಪಿಯ ಮಾಜಿ ಸಿಎಂ!

masthmagaa.com:

ಕೊರೋನಾಗೂ ಬದುಕೋ ಹಕ್ಕಿದೆ ಅಂತ ಉತ್ತರಾಖಂಡ್ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ಧಾರೆ. ಕೊರೋನಾ ಬಗ್ಗೆ ಮಾತನಾಡಿದ ಅವರು, ಫಿಲಾಸಫಿಕಲ್ ಆಂಗಲ್​ನಲ್ಲಿ ನೋಡಿದ್ರೆ ಕೊರೋನಾ ವೈರಸ್ ಕೂಡ ಒಂದು ಜೀವಿ.. ನಮ್ಮೆಲ್ಲರಂತೆ ಅದಕ್ಕೂ ಬದುಕೋಕೆ ಹಕ್ಕಿದೆ. ಆದ್ರೆ ನಮ್ಮನ್ನ ನಾವು ಬುದ್ಧಿವಂತರು ಅಂದುಕೊಂಡು ಅದನ್ನು ನಾಶ ಮಾಡಲು ಹೊರಟಿದ್ದೇವೆ. ಅದಕ್ಕಾಗಿ ಇದು ನಿರಂತರವಾಗಿ ರೂಪಾಂತರವಾಗ್ತಿದೆ ಅಂತ ಹೇಳಿದ್ದಾರೆ. ವಾ ಎಂಥಾ ಮಾತು..ಇಂಥದ್ದೆಲ್ಲಾ ಇವರಿಗೆ ಮಾತ್ರ ಹೊಳೆಯೋದೇನೋ.. ಆದ್ರೆ ಕೊರೋನಾ ಒಂದು ಜೀವಿಯೇ ಅಲ್ಲ ಅನ್ನೋದು ಇವರಿಗೆ ಗೊತ್ತಿಲ್ಲ.

-masthmagaa

Contact Us for Advertisement

Leave a Reply