ವಿಶ್ವದಾಖಲೆ ಬರೆದ ಫುಟ್ಬಾಲ್‌ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ!

masthmagaa.com:

ನಿನ್ನೆ ನಡೆದ ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್‌ ತಂಡದ ನಾಯಕ, ಫುಟ್ಬಾಲ್‌ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ವಿಶ್ವದಾಖಲೆಯೊಂದನ್ನ ತಮ್ಮ ಹೆಸರನಲ್ಲಿ ಬರೆದುಕೊಂಡಿದ್ದಾರೆ. ಘಾನಾ ತಂಡದ ವಿರುದ್ದದ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ 5 ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ದೇ ಘಾನಾ ವಿರುದ್ದ ಪೋರ್ಚುಗಲ್‌ ತಂಡದ ಗೆಲುವಿಗೂ ಕಾರಣರಾಗಿದ್ದಾರೆ. ಈ ಮೊದಲು 2006, 2010, 2014 ಹಾಗೂ 2018ರಲ್ಲಿ ಆಡಿದ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿ ಬ್ರೆಜಿಲ್‌ನ ಪೆಲೆ, ಜರ್ಮನಿಯ ಉವೆ ಸೀಲೆರ್‌ ಮತ್ತು ಮೆರೊಸ್ಲಾವ್‌ ಕ್ಲೋಸ್‌ ಅವರೊಂದಿಗೆ ದಾಖಲೆಯನ್ನ ಹಂಚಿಕೊಂಡಿದ್ರು. ಇದೀಗ 5ನೇ ವಿಶ್ವಕಪ್‌ ಪಂದ್ಯದಲ್ಲಿ ಗೋಲು ಗಳಿಸಿ ಉಳಿದ ಅಟಗಾರರನ್ನ ಹಿಂದಿಕ್ಕಿದ್ದಾರೆ. ಅಂದ್ಹಾಗೆ ಸ್ಟಾರ್‌ ಆಟಗಾರ ಇತ್ತೀಚಿಗಷ್ಟೇ ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ನ್ನ ತೊರೆದಿದ್ರು.

-masthmagaa.com

Contact Us for Advertisement

Leave a Reply