ವೀಕೆಂಡ್ ಖುಷಿ ಕಸಿದ ಜವರಾಯ..ಛೇ ಪಾಪ..

ಚಿತ್ರದುರ್ಗ: ವೀಕೆಂಡ್ ಖುಷಿಯಲ್ಲಿದ್ದವರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಕಲ್ಕೆರೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕ್ರೂಸರ್ ಕಾರು ನಡುವೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕ್ರೂಸರ್‍ನಲ್ಲಿದ್ದ ಲೋಕೇಶ್, ಕಾರಿನಲ್ಲಿದ್ದ ಗೌತಮ್ ಸಿಂಗ್, ಮದನ್ ಸಿಂಗ್, ಮುಖೇಶ್ ಸಿಂಗ್ ಮೃತ ದುರ್ದೈವಿಗಳು. ಮೃತರೆಲ್ಲರೂ ಹಾಸನದ ಅರಸೀಕೆರೆ ಮೂಲದವರು ಎಂದು ತಿಳಿದುಬಂದಿದೆ. ಘಟನೆಯಲ್ಲಿ 7 ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸದುರ್ಗ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Contact Us for Advertisement

Leave a Reply