ಬರ್ಮಿಂಗ್‌ಹ್ಯಾಮ್‌ನಲ್ಲಿ 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟ!

masthmagaa.com:

ಇನ್ನು 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟ ಈ ಬಾರಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಇಂದು ರಾತ್ರಿ ಇಲ್ಲಿನ ಅಲೆಕ್ಸಾಂಡರ್‌ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ರಾಣಿ ಎಲಿಜೆಬೆತ್‌ ಗೈರಾಗಲಿದ್ದು, ಪ್ರಿನ್ಸ್‌ ಚಾರ್ಲ್ಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಅಂತ ಹೇಳಲಾಗಿದೆ. ಇನ್ನು ಭಾರತದ ವಿಷಯಕ್ಕೆ ಬಂದ್ರೆ ಈ ಬಾರಿ ಒಟ್ಟು 214 ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ 26 ಚಿನ್ನ ಸೇರಿ ಒಟ್ಟು 66 ಪದಕ ಗೆದ್ದಿದ್ದ ಭಾರತ, ಈ ಬಾರಿ 100ಕ್ಕೂ ಹೆಚ್ಚು ಪದಕ ಗೆಲ್ಲೊ ಗುರಿ ಹೊಂದಿದೆ. ಉದ್ಘಾಟನಾ ಸಮಾರಂಭದ ವೇಳೆ ಪಥ ಸಂಚಲನದಲ್ಲಿ ಪಿ ವಿ ಸಿಂಧು ಧ್ವಜಧಾರಿಣಿಯಾಗಲಿದ್ದಾರೆ. ಅಂದ್ಹಾಗೆ ನೀರಜ್‌ ಚೋಪ್ರಾರನ್ನ ಧ್ವಜಧಾರಿಯಾಗಿ ನೇಮಿಸೋ ಉದ್ದೇಶ ಇತ್ತು. ಆದ್ರೆ ಅವರು ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದರಿಂದ ಕಾಮನ್‌ವೆಲ್ತ್‌ನಿಂದ ಹೊರಗುಳಿದಿದ್ದಾರೆ.

-masthmagaa.com

Contact Us for Advertisement

Leave a Reply