ಅಯೋಧ್ಯೆ ವಿಚಾರಣೆ..ಸುಪ್ರೀಂಕೋರ್ಟ್​​ನಲ್ಲಿ ಹೈಡ್ರಾಮಾ..!

ದೆಹಲಿ: ಸುಪ್ರೀಂಕೋರ್ಟ್​​ನಲ್ಲಿ ಅಯೋಧ್ಯೆ ವಿಚಾರಣೆ ಕೊನೆಯ ಹಂತಕ್ಕೆ ತಲುಪಿದೆ. ಇಂದು  ವಾದ-ಪ್ರತಿವಾದಕ್ಕೆ ಕೊನೆಯ ದಿನವಾಗಿದ್ದು, ಭಾರಿ ಹೈಡ್ರಾಮಕ್ಕೆ ಸಾಕ್ಷಿಯಾಗಿದೆ. ಹಿಂದೂ ಗಳ ಪರ ವಕೀಲರು ವಾದದ ವೇಳೆ ಹಿಂದೂ ಮಹಾಸಭಾದಿಂದ ನೀಡಲಾದ, ಅಯೋಧ್ಯೆ ಕುರಿತ ಪುಸ್ತಕದಲ್ಲಿರೊ ನಕ್ಷೆಯೊಂದನ್ನು ಕೋರ್ಟ್​​ ಮುಂದೆ ಹಾಜರುಪಡಿಸಿದ್ರು. ಈ ವೇಳೆ ಮುಸ್ಲಿಂ ಪರ ವಕೀಲ ರಾಜೀವ್ ಧವನ್ ನಕ್ಷೆಯನ್ನು ಹರಿದು ಹಾಕಿದ್ರು. ಇದ್ರಿಂದ ಗರಂ ಆದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್, ನೀವು ಈ ರೀತಿ ಮಾಡೋದಾದ್ರೆ, ನಾನು ಎದ್ದು ಹೋಗ್ತೀನಿ ಎಂದು ಹೇಳಿ, ವಿಚಾರಣೆಯನ್ನು ಮುಂದೂಡಿದ್ರು.

ಇನ್ನು ವಿಚಾರಣೆ ಆರಂಭದ ವೇಳೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಮಾತನಾಡಿ,  ಈ ವಿವಾದ ಸಂಬಂಧ ಇಂದು ಸಂಜೆ 5 ಗಂಟೆಯೊಳಗೆ ವಿಚಾರಣೆ ಮುಗಿಯಬೇಕು. ವಾದ -ಪ್ರತಿವಾದ ಸಾಕು ಅಂತ ಹೇಳಿದ್ದಾರೆ.

Contact Us for Advertisement

Leave a Reply