masthmagaa.com:

ಮಾರ್ಚ್‌ 11ರಂದು ರಿಲೀಸ್​​ಗೆ ರೆಡಿಯಾಗಿರೋ ‘ರಾಬರ್ಟ್‌’ ಚಿತ್ರದ ತೆಲುಗು ಆವೃತ್ತಿಯ ಬಿಡುಗಡೆಗೆ ಆಂಧ್ರ ಪ್ರದೇಶದಲ್ಲಿ ವಿರೋಧ ವ್ಯಕ್ತವಾಗಿದೆ. ಕಾರಣ, ಅದೇ ದಿನ ತೆಲುಗಿನ ಎರಡ್ಮೂರು ಸಿನಿಮಾಗಳು ರಿಲೀಸ್ ಆಗ್ತಿವೆ. ಆ ಟೈಮಲ್ಲಿ ಕನ್ನಡದ ಡಬ್‌ ಸಿನಿಮಾದ ‘ರಾಬರ್ಟ್‌’ ಅನ್ನು ಬಿಡುಗಡೆ ಮಾಡ್ಬಾರ್ದು, ಥಿಯೇಟರ್​ಗಳಲ್ಲಿ ರಾಬರ್ಟ್​ ಪ್ರದರ್ಶನಕ್ಕೆ ಅವಕಾಶ ಕೊಡ್ಬಾರ್ದು ಅಂತ ತೆಲುಗು ಚಿತ್ರರಂಗ ಸೂಚನೆ ಕೊಟ್ಟಿದೆ. ಇದಕ್ಕೆ ಕನ್ನಡ ಚಿತ್ರರಂಗದಲ್ಲಿ ಭಾರಿ ವಿರೋಧ ಕೇಳಿ ಬಂದಿದೆ. ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಕೂಡ ತಲುಗು ಚಿತ್ರರಂಗದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಬರ್ಟ್ ಚಿತ್ರದ ನಿರ್ಮಾಪಕರು ಮತ್ತು ದರ್ಶನ್ ಕರ್ನಾಟಕ ಫಿಲಂ ಛೇಂಬರ್​ಗೆ ಈ ಸಂಬಂಧ ದೂರು ಕೂಡ ಕೊಟ್ಟಿದ್ದಾರೆ. ಭಾನುವಾರ ಸ್ಯಾಂಡಲ್​ವುಡ್​ ನಿರ್ಮಾಪಕರ ಜೊತೆ ಚೆನ್ನೈಗೆ ಹೋಗಿ ಸೌತ್ ಇಂಡಿಯನ್ ಫಿಲಂ ಛೇಂಬರ್ ಆಫ್ ಕಾಮರ್ಸ್​ ಜೊತೆ ಮಾತುಕತೆ ನಡೆಸುತ್ತೇವೆ. ಸಮಸ್ಯೆಗೆ ಪರಿಹಾರ ಹುಡುಕುತ್ತೇವೆ ಅಂತ ಕರ್ನಾಟಕ ಫಿಲಂ ಛೇಂಬರ್ ಅಧ್ಯಕ್ಷ ಜೈರಾಜ್​ ಆಶ್ವಾಸನೆ ಕೊಟ್ಟಿದ್ದಾರೆ. ಅಂದ್ಹಾಗೆ ಕರ್ನಾಟಕದಲ್ಲಿ ತೆಲುಗು ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳು ಬಿಡುಗಡೆ ಆಗಲು ಯಾವುದೇ ನಿಯಮ, ತಕರಾರು ಇಲ್ಲ. ಆದ್ರೆ ಕನ್ನಡ ಸಿನಿಮಾಗಳು ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲು ನಿರ್ಬಂಧ ಹಾಕಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

-masthmagaa.com

Contact Us for Advertisement

Leave a Reply