ಮೀಟೂ ಬಗ್ಗೆ ಕೇಳಿದ್ದಕ್ಕೆ ದೀಪಿಕಾ ಪಡುಕೋಣೆ ಹೇಳಿದ್ದೇನು..?

2018ರಲ್ಲಿ ಮೀಟೂ ಚಳವಳಿ ಇಡೀ ದೇಶದ ತುಂಬಾ ಭಾರಿ ಸಂಚಲನ ಮೂಡಿಸಿತ್ತು. ಆದ್ರೆ ಈಗ 2019. ಈಗಲೂ ಹೋಗಿ ಅದೇ ಪ್ರಶ್ನೆ ಕೇಳಿದ್ರೆ ಸುಮ್ನೆ ಇರ್ತಾರಾ..?. ದೀಪಿಕಾ ಪಡುಕೋಣೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಮೀಟೂ ಬಗ್ಗೆ, ಬಾಲಿವುಡ್‍ಗೆ ಬರುವಾಗ ಯಾವ ರೀತಿಯ ಅನುಭವವಾಯ್ತು ಎಂದು ಕೇಳಿದ್ದಕ್ಕೆ ದೀಪಿಕಾ ಸಿಟ್ಟಿಗೆದಿದ್ದಾರೆ. ನೀವು ಯಾವಾಗಲೂ ನಟಿಯರಿಗೆ ಮಾತ್ರವೇ ಯಾಕೆ ಈ ಮಾತು ಕೇಳುತ್ತೀರಿ..? ಸ್ಪೊಟ್ಸ್‍ಮನ್‍ಗಳಿಗೆ ಯಾಕೆ ಪ್ರಶ್ನೆ ಕೇಳಲ್ಲ..? ನಾನಂತೂ ಒಮ್ಮೆಯೂ ಕ್ರಿಕೆಟರ್ಸ್ ಅಥವಾ ಇತರೆ ಆಟಗಾರರ ಬಳಿ ಇಂಥಹ ಪ್ರಶ್ನೆ ಕೇಳಿದ್ದನ್ನು ನೋಡಿಲ್ಲ. ಲೈಂಗಿಕ ಶೋಷಣೆ ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ನಡೆಯುತ್ತೆ. ಎಲ್ಲಾ ಕಡೆಗಳಲ್ಲಿ ಈ ಪಿಡುಗಿಗೆ ಅಂತ್ಯಹಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಮೀಟೂ ದೇಶದಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಬಾಲಿವುಡ್ ಬೆಡಗಿ ತನುಶ್ರೀ ದತ್ತಾ ನಟ ನಾನಾ ಪಾಟೇಕರ್ ಮೇಲೆ ಮೀಟೂ ಆರೋಪ ಹೊರಿಸಿದ್ದರು. ಅದಾದ ಬಳಿಕ ದೇಶಾದ್ಯಂತ ವಿವಿಧೆಡೆ ಹಲವು ನಾಯಕ ನಟರು, ನಿರ್ದೇಶಕರ ವಿರುದ್ಧ ಮೀಟೂ ಆರೋಪ ಕೇಳಿಬಂದಿತ್ತು. ರಾಜ್ಯದಲ್ಲೂ ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಹೊರಿಸಿದ್ದರು.

https://www.instagram.com/p/B3aC9uwAN_6/?utm_source=ig_web_copy_link

Contact Us for Advertisement

Leave a Reply