ಐದು ವರ್ಷಗಳಲ್ಲಿ 334% ಏರಿಕೆಯಾದ ರಕ್ಷಣಾ ಉತ್ಪನ್ನಗಳ ರಫ್ತು!

masthmagaa.com:

ಭಾರತದ ಡಿಫೆನ್ಸ್‌ ಎಕ್ಸ್‌ಪೋರ್ಟ್ಸ್‌ ಅಂದ್ರೆ ರಕ್ಷಣಾ ಉತ್ಪನ್ನಗಳ ರಫ್ತು ಕಳೆದ ಐದು ವರ್ಷಗಳಲ್ಲಿ 334% ಏರಿಕೆಯಾಗಿದೆ ಅಂತ ಮಾಧ್ಯಮ ಕೇಂದ್ರ ಮಾಹಿತಿ ಆಯೋಗ ಹೇಳಿದೆ. ಜೊತೆಗೆ ಭಾರತ ಈಗ 75 ದೇಶಗಳಿಗೆ ರಕ್ಷಣಾ ಸಾಮಾಗ್ರಿಗಳನ್ನ ರಫ್ತು ಮಾಡ್ತಿದೆ ಅಂತ ಕೂಡ ಮಾಹಿತಿ ನೀಡಿದೆ. ಅಂದ್ಹಾಗೆ ಕಳೆದ ಜುಲೈನಲ್ಲಿ ಕೂಡ ಈ ಬಗ್ಗೆ ರಕ್ಷಣಾ ಸಚಿವಾಲಯ ಮಾಹಿತಿ ನೀಡಿತ್ತು. 2021-22ನೇ ಸಾಲಿನಲ್ಲಿ ಒಟ್ಟು 13 ಸಾವಿರ ಕೋಟಿ ಮೌಲ್ಯದ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳನ್ನ ಭಾರತ ರಫ್ತು ಮಾಡಿತ್ತು. ಇದು ಕಳೆದ ಐದು ವರ್ಷಗಳಿಗೆ ಹೋಲಿಕೆ ಮಾಡಿದ್ರೆ 8 ಪಟ್ಟು ಹೆಚ್ಚಾಗಿತ್ತು.

-masthmagaa.com

Contact Us for Advertisement

Leave a Reply