ಫ್ರಾನ್ಸ್‍ನಲ್ಲಿ ರಫೇಲ್ ಮೇಲೆ ಓಂ ಬರೆದು, ಲಿಂಬೆ ಹಣ್ಣು ಇಟ್ಟು ಪೂಜೆ..ಬಳಿಕ ಹಾರಾಟ..

ಮೊದಲ ರಫೇಲ್ ಯುದ್ಧ ವಿಮಾನವನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಫ್ರಾನ್ಸ್‍ನ ಮೆರಿಗ್ ನ್ಯಾಕ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮೊದಲ ರಫೇಲ್ ಯುದ್ಧ ವಿಮಾನವನ್ನು ಸಾಂಕೇತಿಕವಾಗಿ ಪಡೆದರು. ನಂತರ ವಿಮಾನದ ಮೇಲೆ ಓಂ ಬರೆದು ಆಯುಧ ಪೂಜೆ ನೆರವೇರಿಸಿದ್ರು. ನಂತರ ವಿಮಾನವೇರಿ ಕಾಕ್‍ಪಿಟ್‍ನಲ್ಲಿ ಕುಳಿತು ಹಾರಾಟ ನಡೆಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ರಾಜನಾಥ್ ಸಿಂಗ್, ಇದು ಭಾರತದ ಸೇನಾಪಡೆಗೆ ಐತಿಹಾಸಿಕ ದಿನ. ವಾಯುಸೇನೆಗೆ ರಫೇಲ್ ಸೇರ್ಪಡೆಯಿಂದ ಮತ್ತಷ್ಟು ಶಕ್ತಿಶಾಲಿಯಾಗಲಿದೆ ಅಂದ್ರು.

ಈ ಬಗ್ಗೆ ಮಾತನಾಡಿದ ಡಸಾಲ್ಟ್ ವಿಮಾನಸಂಸ್ಥೆ ಮುಖ್ಯಸ್ಥ ಈ ದಿನ ಭಾರತ ಮತ್ತು ಭಾರತದ ವಾಯುಸೇನೆಗೆ ಮಹತ್ವದ್ದಾಗಿದೆ. ಅದೇ ರೀತಿ ಫ್ರಾನ್ಸ್ ಮತ್ತು ಡಸಾಲ್ಟ್ ಏವಿಯೇಷನ್‍ಗೂ ಇದು ಮಹತ್ವದ ದಿನವಾಗಿದೆ. ನಾವು ಒಪ್ಪಂದದಲ್ಲಿ ತಿಳಿಸಿದಂತೆ ನಡೆದುಕೊಂಡಿದ್ದೇವೆ. ಈಗ ವಿಮಾನ ಹಾರಾಟಕ್ಕೆ ಸಿದ್ಧವಾಗಿದೆ ಅಂದ್ರು.

ರಾಜನಾಥ್ ಸಿಂಗ್ ಮೂರು ದಿನಗಳ ಕಾಲ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. ರಫೇಲ್ ಇಂದು ಸಾಂಕೇತಿಕವಾಗಿ ಹಸ್ತಾಂತರ ಆಗಿದ್ದು, ಮುಂದಿನ ಮೇ ತಿಂಗಳಲ್ಲಿ ಮೊದಲ 4 ರಫೇಲ್ ವಿಮಾನಗಳು ಭಾರತಕ್ಕೆ ಬರಲಿವೆ. ಒಟ್ಟು 36 ವಿಮಾನಗಳ 59 ಸಾವಿರ ಕೋಟಿ ವೆಚ್ಚದ ಒಪ್ಪಂದ ಇದಾಗಿತ್ತು.

Contact Us for Advertisement

Leave a Reply