ಭಾರತದಿಂದ ಟೀಕೆಗೆ ಒಳಗಾಗಿದ್ದ ಟೆನಿಸ್‌ ಆಟಗಾರ್ತಿ ಹೇಳಿದ್ದೇನು?

masthmagaa.com:

ಭಾರತದ ಬಗ್ಗೆ ಟೀಕೆ ಮಾಡಿ ಟ್ರೋಲ್‌ಗೆ ಒಳಗಾಗಿದ್ದ ಸರ್ಬಿಯಾ ಟೆನ್ನಿಸ್‌ ಆಟಗಾರ್ತಿ ಡೆಜಾನಾ ರಾಡಾನೋವಿಚ್ ಹೇಳಿಕೆಯೊಂದನ್ನ ನೀಡಿದ್ದಾರೆ. ಕಳೆದ ತಿಂಗಳು ಟೆನ್ನಿಸ್‌ ಟೂರ್ನಿಗಾಗಿ ಭಾರತಕ್ಕೆ ಆಗಮಿಸಿದ್ದ ರಾಡಾನೋವಿಚ್, ಭಾರತದ ಆಹಾರ, ಟ್ರಾಫಿಕ್‌, ನೈರ್ಮಲ್ಯದ ವಿಚಾರವಾಗಿ ಭಾರತವನ್ನ ಟೀಕಿಸಿದ್ರು. ಅಲ್ದೇ ಭಾರತಕ್ಕೆ ಮತ್ತೊಮ್ಮೆ ಬರಲು ಇಷ್ಟ ಪಡಲ್ಲ ಅಂತ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್‌ ಬೇರೆ ಹಾಕಿದ್ರು. ಇದರ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ರಾಡಾನೋವಿಚ್‌ ಅವ್ರನ್ನ ರೇಸಿಸ್ಟ್‌ ಅಂತ ಟ್ರಾಲ್‌ ಮಾಡಲಾಗಿತ್ತು. ಇದೀಗ ರಾಡಾನೋವಿಚ್‌, ಇದ್ರಲ್ಲಿ ರೇಸಿಸ್ಮ್‌ ಏನಿದೆ, ನನ್ನ ಅಭಿಪ್ರಾಯ ಹೇಳಿದ್ದೇನೆ ಅಂದಿದ್ದಾರೆ. ಅಂದ್ಹಾಗೆ ಇಂಡಿಯನ್‌ ಟೆನ್ನಿಸ್‌ ಫೆಡರೇಶನ್‌ ಟೂರ್ನಿಯಲ್ಲಿ ಆಡೋಕೆ ಭಾರತಕ್ಕೆ ಬಂದಿದ್ದ ಇವ್ರು, ಭಾರತದ ವೈದೇಹಿ ಚೌಧರಿ ಎದುರು ಸೋತು, ರಿಟೈರ್ಡ್‌ ಹರ್ಟ್‌ ಆಗಿ ವಾಪಸ್‌ ಹೋಗಿದ್ರು. ಹೋಗೋ ಟೈಮಲ್ಲಿ ಭಾರತ ಹಂಗೆ, ಹಿಂಗೆ ಅಂತ ಸಾಲು ಸಾಲು ಪೋಸ್ಟ್‌ಗಳನ್ನ ಹಾಕಿದ್ರು.

-masthmagaa.com

Contact Us for Advertisement

Leave a Reply