ಡೆನ್ಮಾರ್ಕ್‍ಗೆ ತೆರಳಲು ಕೇಜ್ರಿವಾಲ್‍ಗೆ ಸಿಗಲಿಲ್ಲ ಅನುಮತಿ

ಜಲವಾಯು ಸಮ್ಮೇಳನಕ್ಕೆ ಡೆನ್ಮಾರ್ಕ್ ಹೊರಟಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ವಿದೇಶಾಂಗ ಇಲಾಖೆ ಅನುಮತಿ ನೀಡಿಲ್ಲ. ಇದ್ರಿಂದ ಅರವಿಂದ್ ಕೇಜ್ರಿವಾಲ್ ಡೆನ್ಮಾರ್ಕ್ ಪ್ರಯಾಣ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಪ್ ಸಂಸದ ಸಂಜಯ್ ಸಿಂಹ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.

Éೀಂದ್ರ ಸರ್ಕಾರ ದೆಹಲಿ ಜೊತೆ ಇಷ್ಟೊಂದು ಕೆಟ್ಟದಾಗಿ ನಡೆದುಕೊಳ್ಳುತ್ತಿರೋದು ದೌರ್ಭಾಗ್ಯ. ಅರವಿಂದ್ ಕೇಜ್ರಿವಾಲ್ ಡೆನ್ಮಾರ್ಕ್ ಹೋಗ್ತಿರೋದು ಮೋಜು, ಮಸ್ತಿ ಮಾಡೋಕೆ ಅಲ್ಲ. ಬದಲಾಗಿ ಏಷಿಯಾದ 40 ನಗರಗಳ ಮೇಯರ್‍ಗಳಿಗೆ ದೆಹಲಿಯಲ್ಲಿ ಶೇ.25ರಷ್ಟು ಮಾಲಿನ್ಯ ಪ್ರಮಾಣ ಹೇಗೆ ಕಡಿಮೆಯಾಯ್ತು..? ಎಂದು ತಿಳಿಸಲು ಹೋಗ್ತಿದ್ದಾರೆ ಎಂದಿದ್ದಾರೆ. ಅಲ್ಲದೆ ಅರವಿಂದ್ ಕೇಜ್ರಿವಾಲ್ ಅಲ್ಲಿ ದೇಶದ ಘನತೆ ಹೆಚ್ಚಿಸುವಂತಹ ಮಾತುಗಳನ್ನಾಡಲು ಹೊರಟಿದ್ದರು ಅಂತ ಸಂಜಯ್ ಹೇಳಿದ್ದಾರೆ.

ಪ್ಲಾನ್ ಪ್ರಕಾರ ಮಂಗಳವಾರ ಮಧ್ಯಾಹ್ನ ಕೇಜ್ರಿವಾಲ್ ಅವರು ಡೆನ್ಮಾರ್ಕ್‍ಗೆ ಹೊರಡಬೇಕಿತ್ತು.

Contact Us for Advertisement

Leave a Reply