ತಾಯಿಯ ಹತ್ಯೆ ಮತ್ತು ದರೋಡೆಗೆ ಸುಪಾರಿ ಕೊಟ್ಟ ಮಗ..!

ದೆಹಲಿಯಲ್ಲಿ ಯುವಕನೊಬ್ಬ ತನ್ನ ತಾಯಿಯ ಹತ್ಯೆ ಮತ್ತು ದರೋಡೆ ಮಾಡಲು ಇಬ್ಬರು ದುಷ್ಕರ್ಮಿಗಳಿಗೆ ಸುಪಾರಿ ಕೊಟ್ಟಿದ್ದಾನೆ. ಆದ್ರೆ ಮಗನ ಈ ದುಷ್ಟ ಯೋಜನೆ ಯಶಸ್ವಿಯಾಗಲಿಲ್ಲ. ಹಾಗೂ ಪೊಲೀಸರು ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಅಂಶ್ ಡಿಂಗ್ರಾ ಎಂಬ ಯುವಕ ತನ್ನ ತಾಯಿ ಮಂಜು ಹತ್ಯೆ ಮತ್ತು ದರೋಡೆಗೆ ಯಾರಿಗೆ ಸುಪಾರಿ ಕೊಟ್ಟಿದ್ದನೋ ಆತ ಮಂಗೋಲ್ ಪುರಿ ಠಾಣೆಯ ಆರೋಪಿಯಾಗಿದ್ದ. ಈ ಯುವಕ ಆರೊಪಿಗಳ ಜೊತೆ 50 ಸಾವಿರದ ಒಪ್ಪಂದ ಕೂಡ ಮಾಡಿಕೊಂಡಿದ್ದ. ಆದ್ರೆ ದುಷ್ಟರು ಹತ್ಯೆಗೆ ಬಂದಾಗ ಮಹಿಳೆ ತನ್ನ ಬುದ್ಧಿವಂತಿಕೆಯಿಂದ ಪಾರಾಗಿದ್ದಾರೆ. ಅಲ್ಲದೆ ಪೊಲೀಸ್ ಸ್ಟೇಷನ್‍ಗೆ ಓಡಿ ಹೋಗಿ ವಿಷಯ ತಿಳಿಸಿದ್ದಾರೆ. ಆಗ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪುತ್ರನೇ ಹತ್ಯೆಗೆ ಸುಪಾರಿ ಕೊಟ್ಟಿರೋ ವಿಚಾರ ಬೆಳಕಿಗೆ ಬಂದಿದೆ. ತನ್ನ ತಾಯಿಯ ಕೆಲಸದಿಂದ ಅಂಶ್ ಡಿಂಗ್ರಾ ಬೇಸರಗೊಂಡಿದ್ದ. ಹೀಗಾಗಿಯೇ ತಾಯಿಯ ಕೊಲೆಗೆ ಸುಪಾರಿ ಕೊಟ್ಟಿದ್ದ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳ ವಿರುದ್ಧ ವಿವಿಧ ಕೇಸ್ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.

Contact Us for Advertisement

Leave a Reply