ದೆಹಲಿ ಉಪಚುನಾವಣೆಯಲ್ಲಿ ಕೇಜ್ರಿ ಪಕ್ಷಕ್ಕೆ ಮೇಲುಗೈ!

masthmagaa.com:

ದೆಹಲಿ: ಸ್ಥಳೀಯ ಚುನಾವಣೆ ನಡೆದ 5ರ ಪೈಕಿ 4 ಸ್ಥಾನಗಳನ್ನು ಗೆಲ್ಲುವಲ್ಲಿ ಆಮ್ ಆದ್ಮಿ ಪಕ್ಷ ಯಶಸ್ವಿಯಾಗಿದೆ. ಇಲ್ಲಿನ ಕಲ್ಯಾಣ್​ಪುರಿ, ರೋಹಿಣಿ, ತ್ರಿಲೋಕ್​ಪುರಿ, ಶಾಲಿಮಾರ್ ಮತ್ತು ಚೌವ್ಹಾಣ್ ಬಂಗಾರ್ ನಗರ ಪಾಲಿಕೆಗೆ ಚುನಾವಣೆ ನಡೆದಿತ್ತು. ಅದ್ರಲ್ಲಿ ಚೌವ್ಹಾಣ್ ಬಂಗಾರ್ ಒಂದರಲ್ಲಿ ಕಾಂಗ್ರೆಸ್ ಗೆದ್ದಿದ್ದು, ಉಳಿದೆಲ್ಲಾ ಕ್ಷೇತ್ರಗಳನ್ನು ಆಪ್ ಗೆದ್ದುಕೊಂಡಿದೆ.

ಇದು 2022ರಲ್ಲಿ ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಗೆ ಜನ ಬಿಜೆಪಿಗೆ ನೀಡಿರುವ ಸಂದೇಶವಾಗಿದೆ. ದೆಹಲಿಯಲ್ಲಿ ಜನ ಬಿಜೆಪಿಯ ಆಡಳಿತವನ್ನು ಇಷ್ಟಪಡೋದಿಲ್ಲ. ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕ ಆಡಳಿತಕ್ಕೆ ಜನ ಮತ ಹಾಕುತ್ತಾರೆ ಅಂತ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply