ಪ್ರಧಾನಿ ಮೋದಿ ಅಣ್ಣನ ಮಗಳ ದಾಖಲೆಗಳ ಕಳವು..!

ದೆಹಲಿಯಲ್ಲಿ ಪ್ರಧಾನಿ ಮೋದಿಯವರ ಅಣ್ಣನ ಮಗಳ ಪರ್ಸ್‍ನ್ನು ಕಳ್ಳರು ಕದ್ದೊಯ್ದಿದ್ದಾರೆ. ಪರ್ಸ್‍ನಲ್ಲಿ ನಗದು ಹಣದ ಜೊತೆಗೆ ಒಂದಷ್ಟು ದಾಖಲೆಗಳು ಕೂಡ ಇದ್ದವು. ದೆಹಲಿಯ ಸಿವಿಲ್ ಲೈನ್ಸ್ ನಲ್ಲಿ ಈ ಘಟನೆ ನಡೆದಿದೆ.

ಇವತ್ತು ಬೆಳಗ್ಗೆ ಪ್ರಧಾನಿ ಮೋದಿಯವರ ಅಣ್ಣನ ಮಗಳು ಧಮಯಂತಿ ಅಮೃತಸರದಿಂದ ದೆಹಲಿಗೆ ಬಂದಿದ್ದರು. ಸಿವಿಲ್ ಲೈನ್ಸ್ ನಲ್ಲಿರೋ ಗುಜರಾತ್ ಸಮಾಜ್ ಭವನ ಕಟ್ಟಡದಲ್ಲಿ ಅವರ ರೂಂ ಬುಕ್ ಆಗಿತ್ತು. ಹಳೆ ದಿಲ್ಲಿಯಿಂದ ಅವರು ಆಟೋ ಮೂಲಕ ತಮ್ಮ ಕುಟುಂಬಸ್ಥರೊಂದಿಗೆ ಗುಜರಾತ್ ಸಮಾಜ್ ಭವನ ತಲುಪಿದ್ದಾರೆ. ಅವರು ಇನ್ನೇನು ಆಟೋದಿಂದ ಇಳಿಯಬೇಕು ಎನ್ನುವಷ್ಟರಲ್ಲಿ ಸ್ಕೂಟಿಯಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪರ್ಸ್ ಕದ್ದು ಓಡಿಹೋಗಿದ್ದಾರೆ.

ದಮಯಂತಿ ಅವರ ಪರ್ಸ್‍ನಲ್ಲಿ 56 ಸಾವಿರ ರೂಪಾಯಿ ನಗದು ಮತ್ತು 2 ಮೊಬೈಲ್ ಮತ್ತು ಕೆಲವೊಂದು ದಾಖಲೆಗಳಿದ್ದವು. ಇವತ್ತು ಸಂಜೆ ಅವರು ಅಹ್ಮದಾಬಾದ್‍ಗೆ ವಿಮಾನ ಕೂಡ ಬುಕ್ ಮಾಡಿದ್ರು. ಆದ್ರೆ ಈಗ ದಾಖಲೆಗಳು ಕಳವಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Contact Us for Advertisement

Leave a Reply