ಸಿಂಹದ ಮುಂದೆ ಹೋಗಿ ಕುಳಿತ ಯುವಕ..! ಆಮೇಲೆ..?

ದೆಹಲಿ: ಯುವಕನೊಬ್ಬ ತಡೆಗೋಡೆ ದಾಟಿ ಸಿಂಹವಿದ್ದ ಪ್ರದೇಶಕ್ಕೆ ಹೋಗಿರೋ ಘಟನೆ ದೆಹಲಿಯ ಝೂನಲ್ಲಿ ನಡೆದಿದೆ. ತುಂಬಾ ಜನ ಪ್ರವಾಸಿಗರು ಝೂನಲ್ಲಿ ಪ್ರಾಣಿಗಳನ್ನು ವೀಕ್ಷಿಸ್ತಿದ್ರು. ಆದ್ರೆ ಈ ವೇಳೆ ಅಲ್ಲಿಗೆ ಬಂದ ಯುವಕನೊಬ್ಬ ಕಬ್ಬಿಣದ ಪರದೆಯ ತಡೆಗೋಡೆ ಹಾರಿ ಒಳಗೆ ಹೋಗಿದ್ದಾನೆ. ಈ ವೇಳೆ ಅಲ್ಲಿದ್ದ ಪ್ರವಾಸಿಗರು ತಡೆಯಲು ಯತ್ನಿಸಿದರಾದ್ರೂ ಯಾವುದೇ ಸಾಧ್ಯವಾಗಲಿಲ್ಲ.  ಇಷ್ಟಕ್ಕೇ ಸುಮ್ಮನಾಗದ ಯುವಕ ಸೀದಾ ಸಿಂಹದ ಹತ್ತಿರವೇ ಹೋಗಿ ಕುಳಿತಿದ್ದಾನೆ. ನಂತರ ಅಲ್ಲಿಗೆ ದೌಡಾಯಿಸಿದ ರಕ್ಷಣಾ ಸಿಬ್ಬಂದಿ ಯುವಕನನ್ನು ರಕ್ಷಿಸಿದ್ದಾರೆ. ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗ್ತಿದೆ. ಯುವಕನ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ ಅಂತ ಮೂಲಗಳು ತಿಳಿಸಿವೆ. ಬಿಹಾರ ಮೂಲದ ಈತನಿಗೆ 28 ವರ್ಷ ವಯಸ್ಸಾಗಿದ್ದು, ಹೆಸರು ರಿಹಾನಾ ಖಾನ್ ಎಂದು ತಿಳಿದು ಬಂದಿದೆ.

Contact Us for Advertisement

Leave a Reply