ದಸರಾ ಕಾರ್ಯಕ್ರಮಕ್ಕೆ ವಿದೇಶಗಳಿಂದಲೂ ಅರ್ಜಿ ಸಲ್ಲಿಸಿದ ಕಲಾವಿದರು!

masthmagaa.com:

ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸೋಕೆ ದೇಶದ ವಿವಿಧ ರಾಜ್ಯಗಳಿಂದ ಮಾತ್ರವಲ್ದೇ ವಿದೇಶಗಳಿಂದಲೂ ಅರ್ಜಿ ಬಂದಿವೆ. ಈವರೆಗೆ 637 ಅರ್ಜಿಗಳು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಗೆ ತಲುಪಿವೆ. 9 ದಿನ ನಡೆಯುವ ದಸರಾ ಭಾಗವಾಗಿ ಅರಮನೆಯ ಮುಖ್ಯ ವೇದಿಕೆ ಸೇರಿದಂತೆ ನಗರದ 8 ಕಡೆ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಕಛೇರಿ ಹಾಗೂ ನಾಟಕ ಪ್ರದರ್ಶನ ಇರುತ್ತದೆ. ಈ ಹಿನ್ನೆಲೆ ದೇಶ ವಿದೇಶಗಳಿಂದ ಅನೇಕ ಕಲಾವಿದರು ಅರ್ಜಿ ಸಲ್ಲಿಸುತ್ತಿದ್ದಾರೆ. ಪಂಜಾಬ್‌, ಅಸ್ಸಾಂ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ಕೆನಡಾ, ಅಮೆರಿಕಾ, ಬ್ರಿಟನ್‌ನಿಂದಲೂ ಕಲಾವಿದರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ ಅಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್‌ ತಿಳಿಸಿದ್ದಾರೆ. ಈ ವರ್ಷ ಅರ್ಜಿ ಆಹ್ವಾನಿಸುವ ಮುನ್ನವೇ 450 ಅರ್ಜಿಗಳು ಬಂದಿದ್ದವು. ಅರ್ಜಿ ಕರೆ ಮಾಡಿದ 4 ದಿನಕ್ಕೆ 200 ಅರ್ಜಿಗಳು ಬಂದಿವೆ. ಸೆಪ್ಟಂಬರ್‌ 25 ರಂದು ಅರ್ಜಿ ಸಲ್ಲಿಸೋಕೆ ಕೊನೆಯ ದಿನಾಂಕ. ಹೆಚ್ಚಿನ ಅರ್ಜಿಗಳು ಬರುವ ನಿರೀಕ್ಷೆಯಿದೆ ಅಂತ ಸುದರ್ಶನ್‌ ತಿಳಿಸಿದ್ದಾರೆ.

 

-masthmagaa.com

Contact Us for Advertisement

Leave a Reply