masthmagaa.com:

ಬಾಲಿವುಡ್​ ನಟಿ ಕಂಗನಾ ರಣಾವತ್ ಅವರ ಕಚೇರಿಯನ್ನ ಮುಂಬೈ ಪಾಲಿಕೆ ಅಧಿಕಾರಿಗಳು ಕೆಡವಿದ್ದು ಕೆಟ್ಟ ಉದ್ದೇಶದಿಂದ ಕೂಡಿದೆ. ಹೀಗಾಗಿ ಕಟ್ಟಡಕ್ಕೆ ಆದ ಹಾನಿಯನ್ನು ಪರಿಶೀಲಿಸಲು ಮೌಲ್ಯಮಾಪಕರನ್ನು ನೇಮಿಸುವಂತೆ ಬಾಂಬೆ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಈ ಮೌಲ್ಯಮಾಪಕರು ಕೋರ್ಟ್​ಗೆ ವರದಿ ಸಲ್ಲಿಸುತ್ತಾರೆ. ಬಳಿಕವಷ್ಟೇ ಕಂಗನಾ ರಣಾವತ್​ಗೆ ಎಷ್ಟು ಹಣವನ್ನ ಪರಿಹಾರವಾಗಿ ನೀಡಬೇಕು ಅನ್ನೋ ಬಗ್ಗೆ ಕೋರ್ಟ್​ ಆದೇಶ ಹೊರಡಿಸಲಿದೆ ಅಂತ ಬಾಂಬೆ ಹೈಕೋರ್ಟ್​ ಹೇಳಿದೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಬೇರೆಯವರ ಬಗ್ಗೆ ಕಾಮೆಂಟ್​ ಮಾಡುವಾಗ ಸಂಯಮ ತೋರಬೇಕು ಅಂತ ಕಂಗನಾ ರಣಾವತ್​ಗೆ ಸೂಚಿಸಲಾಗಿದೆ.

ಅಂದ್ಹಾಗೆ ಸೆಪ್ಟೆಂಬರ್​ನಲ್ಲಿ ಮುಂಬೈನ ಪಾಲಿ ಹಿಲ್​​ನಲ್ಲಿದ್ದ ಕಂಗನಾ ರಣಾವತ್ ಅವರ ಕಚೇರಿ ಮತ್ತು ಬಂಗಲೆಯನ್ನ ಬಿಎಂಸಿ ಅಧಿಕಾರಿಗಳು ಕೆಡವಿ ಹಾಕಿದ್ರು. ಈ ಸಂಬಂಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಗನಾ, ಆಗಿರುವ ನಷ್ಟಕ್ಕೆ 2 ಕೋಟಿ ರೂಪಾಯಿ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ರು. ಆದ್ರೆ ಕಂಗನಾ  2 ಕೋಟಿ ಕೇಳೋದ್ರಲ್ಲಿ ಅರ್ಥಾನೇ ಇಲ್ಲ ಅಂತ ಬಿಎಂಸಿ ಕೋರ್ಟ್​ಗೆ ತಿಳಿಸಿತ್ತು. ಇದೀಗ ಕೋರ್ಟ್ ಬಿಎಂಸಿ ನಡೆ ದುರುದ್ದೇಶದಿಂದ ಕೂಡಿತ್ತು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply