ಇಸ್ರೇಲ್ ನೌಕಾಪಡೆಗೆ ಸಬ್​​ಮರೀನ್ ​​ಬಲ!

masthmagaa.com:

ಗಾಜಾ ಪಟ್ಟಿಯ ಹಮಾಸ್ ಜೊತೆ ನಿರಂತರ ಸಂಘರ್ಷ ಹೊಂದಿರೋ ಇಸ್ರೇಲ್ ತನ್ನ ನೌಕಾಪಡೆ ಗಟ್ಟಿ ಮಾಡ್ಕೊಳ್ಳಕ್ಕೆ ಮುಂದಾಗಿದೆ. ಜರ್ಮನಿ ಮೂಲಕ ಥಿಸ್ಸೆನ್​ಕ್ರುಪ್​​ ಮರೀನ್ ಸಿಸ್ಟಮ್ಸ್​ ಜೊತೆ ಸಬ್​ಮರೀನ್​​ ಅಭಿವೃದ್ಧಿ ಒಪ್ಪಂದ ಮಾಡ್ಕೊಂಡಿದೆ. 340 ಕೋಟಿ ಡಾಲರ್ ಅಂದ್ರೆ 25 ಸಾವಿರ ಕೋಟಿಗೂ ಅಧಿಕ ಮೊತ್ತದ ಒಪ್ಪಂದ ಇದಾಗಿದೆ. ಇದ್ರ ಪ್ರಕಾರ ಥಿಸ್ಸೆನ್​ಕ್ರುಪ್ ಕಂಪನಿ ಮೂರು ಅಡ್ವಾನ್ಸ್ಡ್​​ ಸಬ್​​ಮರೀನ್​​ಗಳನ್ನು ನಿರ್ಮಿಸಿ ಇಸ್ರೇಲ್​​ಗೆ ನೀಡಲಿದೆ. ಅದ್ರಲ್ಲಿ ಮೊದಲ ಸಬ್​ಮರೀನ್​​ನ್ನು ಮುಂದಿನ 9 ವರ್ಷಗಳ ಒಳಗಾಗಿ ನೀಡಬೇಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಇಸ್ರೇಲ್ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್​​​, ಒಪ್ಪಂದಕ್ಕೆ ಸಹಕರಿಸಿದ ಜರ್ಮನ್ ಸರ್ಕಾರಕ್ಕೆ ಧನ್ಯವಾದಗಳು.. ಈ ಹೊಸ ಸಬ್​ಮರೀನ್​​ಗಳು ಇಸ್ರೇಲ್ ನೌಕಾಪಡೆಯ ಸಾಮರ್ಥ್ಯವನ್ನ ಹೆಚ್ಚಿಸೋದ್ರ ಜೊತೆಗೆ ಈ ಭಾಗದಲ್ಲಿ ದೇಶದ ಭದ್ರತೆ ಕಾಪಾಡಲು ಸಹಕರಿಸುತ್ತೆ ಅನ್ನೋ ನಂಬಿಕೆ ಇದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply